ಕಚೇರಿಗೆ ಹೋಗಿ ಕೆಲಸ ಮಾಡುವವರಿಗಿಂತ ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿಯೇ ಮಾಡಬಹುದಾದ ಕೆಲಸಗಳು ಹುಡುಕಾಟ ಹೆಚ್ಚಾಗಿದೆ. ಅನೇಕರು ವರ್ಕ್ ಫ್ರಂ ಹೋಮ್ ಕೆಲಸ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಆದ್ರೆ ಮತ್ತೆ ಕೆಲವರಿಗೆ ಎಲ್ಲೆಲ್ಲಿ ವರ್ಕ್ ಫ್ರಂ ಹೋಮ್ ಅವಕಾಶವಿದೆ ಎನ್ನುವುದು ತಿಳಿದಿರುವುದಿಲ್ಲ. ಪ್ರಸಿದ್ಧ ಇ-ಕಾಮರ್ಸ್ ಕಂಪನಿ ಅಮೆಜಾನ್ ವರ್ಕ್ ಫ್ರಂ ಹೋಮ್ ಅವಕಾಶ ನೀಡ್ತಿದೆ.
ಅಮೆಜಾನ್ ಸೆಲ್ಲರ್ ಪಾರ್ಟನರ್ ಸಪೋರ್ಟ್ ಕೆಲಸವನ್ನು ಮನೆಯಲ್ಲಿಯೇ ಮಾಡಬಹುದು. ಬಿಎಸ್ಸಿ, ಬಿಎ, ಬಿಕಾಂ, ಬಿಬಿಎ ಪದವಿ ಪಡೆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಫ್ರೆಶರ್ ಗಳಿಗೆ ಅಮೆಜಾನ್ ಅವಕಾಶ ನೀಡ್ತಿದೆ. ಈಗ್ಲೂ ಆಸಕ್ತರು ಅರ್ಜಿ ಸಲ್ಲಿಸಬಹುದು. ಇಂಗ್ಲೀಷ್ ಬರೆಯಬಲ್ಲ ಮತ್ತು ಮಾತನಾಡಬಲ್ಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. 24/7 ಕೆಲಸವಿರುವ ಕಾರಣ ರಾತ್ರಿ ಪಾಳಿ ನಿರ್ವಹಿಸಲು ಸಿದ್ಧರಿರಬೇಕು. ವಾರದಲ್ಲಿ ಎರಡು ದಿನ ರಜೆ ಇರುತ್ತದೆ. ನಾಲ್ಕು ತಿಂಗಳು ಯೋಜಿತವಲ್ಲದ ರಜೆ ಸಿಗುವುದಿಲ್ಲ.
ಅರ್ಜಿ ಸಲ್ಲಿಸುವವರಿಗೆ ಡೆಸ್ಕ್‌ಟಾಪ್ / ಲ್ಯಾಪ್‌ಟಾಪ್ ಬಳಸುವ ಸಾಮರ್ಥ್ಯ ಮತ್ತು ಇಂಟರ್ನೆಟ್ ಬ್ರೌಸರ್‌ಗಳು, ವಿಂಡೋಸ್ ಓಎಸ್, ಮೈಕ್ರೋಸಾಫ್ಟ್ ಔಟ್ ಲುಕ್ ಮತ್ತು ಎಂಎಸ್ ಆಫೀಸ್ ಕೆಲಸ ಗೊತ್ತಿರಬೇಕು.
ಕನಿಷ್ಠ 20 ಎಂಬಿಪಿಎಸ್ ವೇಗದೊಂದಿಗೆ ಉತ್ತಮ ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು. ಮೊಬೈಲ್ ಸಂಪರ್ಕ ಸದಾ ಇರಬೇಕು. ವಿದ್ಯುತ್ ಸ್ಥಗಿತಗೊಂಡರೆ ವಿದ್ಯುತ್ ಬ್ಯಾಕ್ ಅಪ್ ಹೊಂದಿರಬೇಕು. ಕರೆಗಳು, ಇಮೇಲ್, ಚಾಟ್ ಮೂಲಕ ಮಾರಾಟಗಾರರೊಂದಿಗೆ ಸಂವಹನ ನಡೆಸಲು ಸಿದ್ಧರಿರಬೇಕು. ಎಎಸ್ಎಪಿ ಲಿಂಕ್ ಮೂಲಕ ಈ ಅರ್ಜಿ ಸಲ್ಲಿಸಬೇಕು. ಇ-ಮೇಲ್ ಮೂಲಕ ಆಯ್ಕೆಯ ಮಾಹಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಕೆಳಕಂಡ ವೆಬ್ ಸೈಟ್ ಗೆ ಭೇಟಿ ನೀಡಬಹುದು. https://jobvision.in/amazon-work-from-home-for-seller-support/