ಅಮೆಜಾನ್ ನ ಪ್ರೈಮ್ ನೌ ಡೆಲಿವರಿ ಅಪ್ಲಿಕೇಶನ್ ಬಳಕೆದಾರರಿಗೆ ಮಹತ್ವದ ಸುದ್ದಿಯಿದೆ. ಕಂಪನಿ ಅಮೆಜಾನ್ ಪ್ರೈಮ್ ನೌ ಸೇವೆಯನ್ನು ಬಂದ್ ಮಾಡಿದೆ. ಅಮೆಜಾನ್ ನೌ ಕಂಪನಿಯ ದಿನಸಿ ವಿತರಣಾ ವೇದಿಕೆಯಾಗಿದೆ. ಅಮೆಜಾನ್ ಪ್ರೈಮ್ ನೌ, ಅಮೆಜಾನ್ ಪ್ರೈಮ್ ಸದಸ್ಯರಿಗೆ ಮಾತ್ರ ಲಭ್ಯವಾಗಲಿದೆ. ಆದರೆ ಈಗ ಕಂಪನಿ ತನ್ನ ಸೇವೆ ನಿಲ್ಲಿಸಿದೆ. ಪ್ರೈಮ್ ನೌ ಅನ್ನು 2014 ರಲ್ಲಿ ಪ್ರಾರಂಭಿಸಲಾಯಿತು.
ಅಮೆಜಾನ್ ನ ಎರಡು ಗಂಟೆ ಡಿಲೆವರಿ ಆಯ್ಕೆ ಅಮೆಜಾನ್ ನ ಮುಖ್ಯ ಅಪ್ಲಿಕೇಷನ್ ಮತ್ತು ವೆಬ್ಸೈಟ್ ನಲ್ಲಿ ಲಭ್ಯವಾಗಲಿದೆ. ಈಗಾಗಲೇ ಭಾರತ, ಜಪಾನ್, ಸಿಂಗಾಪುರದಲ್ಲಿ ಅಮೆಜಾನ್ ಪ್ರೈಮ್ ನೌ ಅಪ್ಲಿಕೇಷನನ್ನು ಅಮೆಜಾನ್ ಗೆ ಸ್ಥಳಾಂತರಿಸಲಾಗಿದೆ. ಜೊತೆಗೆ ಅಮೆಜಾನ್ ಪ್ರೈಮ್ ನೌ ಅಪ್ಲಿಕೇಷನ್ ಬಂದ್ ಮಾಡಲಾಗಿದೆ. ಪ್ರೈಮ್ ನೌ ಆಯ್ಕೆಯನ್ನು 2014ರಲ್ಲಿ ಶುರು ಮಾಡಲಾಗಿತ್ತು. 2016ರಲ್ಲಿ ಪ್ರೈಮ್ ನೌ ಆಯ್ಕೆ ನೀಡಲಾಗಿತ್ತು.
ಶಾಪಿಂಗ್, ಆರ್ಡರ್ ಟ್ರ್ಯಾಕ್ ಮಾಡುವುದು, ಕಸ್ಟಮರ್ ಸಂಪರ್ಕ ಎಲ್ಲ ಸೇವೆ ಒಂದೇ ಅಪ್ಲಿಕೇಷನ್ ನಲ್ಲಿ ಲಭ್ಯವಾಗಲಿದೆ. ಪ್ರೈಮ್ ನೌನಲ್ಲಿ ಕಾಣಿಸುವ ದೈನಂದಿನ ವಸ್ತುಗಳು, ಉಡುಗೊರೆ, ಆಟಿಕೆಗಳು ಈಗ ಅಮೆಜಾನ್‌ನಲ್ಲಿ ಲಭ್ಯವಿರುತ್ತವೆ.