ಇ-ಕಾಮರ್ಸ್ ದೈತ್ಯ ಅಮೆಜಾನ್ ಇಂಡಿಯಾದ ಅಮೆಜಾನ್ ಪೇ, ಗ್ರಾಹಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಇದಕ್ಕೆ ಕಂಪನಿ ಗೋಲ್ಡ್ ವಾಲ್ಟ್ ಎಂದು ಹೆಸರಿಟ್ಟಿದೆ. ಗ್ರಾಹಕರಿಗೆ ಡಿಜಿಟಲ್ ಚಿನ್ನ ಖರೀದಿಸಲು ಇದು ನೆರವಾಗಲಿದೆ. ಅಮೆಜಾನ್ ವೆಬ್‌ಸೈಟ್ ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಒಂದು ರೂಪಾಯಿಗೆ ಗ್ರಾಹಕರು ಬಂಗಾರ ಖರೀದಿ ಮಾಡಬಹುದು.
ಅಮೆಜಾನ್ ಸೇಫ್ ಗೋಲ್ಡ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಸೇಫ್ ಗೋಲ್ಡ್, ಡಿಜಿಟಲ್ ಗೋಲ್ಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಚಿಲ್ಲರೆ ಬ್ರಾಂಡ್ ಆಗಿದ್ದು, ಇದು 995 ಶುದ್ಧತೆಯ 245 ಕ್ಯಾರೆಟ್ ಚಿನ್ನವನ್ನು ನೀಡುತ್ತದೆ. ಅಮೆಜಾನ್ ಪೇನಲ್ಲಿ ಗ್ರಾಹಕರು 1 ರೂಪಾಯಿಗೆ ಬಂಗಾರ ಖರೀದಿ ಮಾಡಬಹುದಾಗಿದೆ. ಯಾವುದೇ ಕೆವೈಸಿ ಇಲ್ಲದೆ ಗ್ರಾಹಕರು 2 ಗ್ರಾಂ ಬಂಗಾರ ಖರೀದಿ ಮಾಡಬಹುದಾಗಿದೆ.
ಮಧ್ಯಮ ಹಾಗೂ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಅಮೆಜಾನ್ ಈ ಸೇವೆ ಶುರು ಮಾಡಿದೆ. ಒಂದು ರೂಪಾಯಿಗೆ ಬಂಗಾರ ನೀಡುವ ಮೂಲಕ ಅಮೆಜಾನ್, ಪೇಟಿಎಂ, ಫೋನ್ ಪೇ, ಗೂಗಲ್ ಪೇ ಗೆ ಸ್ಪರ್ಧೆಯೊಡ್ಡುತ್ತಿದೆ.