ಇ-ಕಾಮರ್ಸ್ ಫ್ಲಾಟ್ಫಾರ್ಮ್ ಅಮೆಜಾನ್ ಪ್ರೈಂ ಸದಸ್ಯರಿಗೆ ಖುಷಿ ಸುದ್ದಿ ನೀಡಿದೆ. ಪ್ರೈಂ ಸದಸ್ಯರಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಇದಕ್ಕೆ ಕಂಪನಿ ಅಡ್ವಾಂಟೇಜ್ ನೋ ಕಾಸ್ಟ್ ಇಎಂಐ ಎಂದು ಹೆಸರಿಟ್ಟಿದೆ. ಈ ಕಾರ್ಯಕ್ರಮದಡಿ ಪ್ರೈಂ ಸದಸ್ಯರು ಕಡಿಮೆ ಮಾಸಿಕ ಇಎಂಐ ಅಡಿ ಸ್ಮಾರ್ಟ್ಫೋನ್ ಖರೀದಿಸಬಹುದಾಗಿದೆ.
ಈ ಕಾರ್ಯಕ್ರಮದಡಿ ಪ್ರೈಂ ಸದಸ್ಯರು ಸ್ಮಾರ್ಟ್ಫೋನ್ ಖರೀದಿ ಮಾಡಿದ್ರೆ ಶೇಕಡಾ 50ರಷ್ಟು ಇಎಂಐ ಕಡಿಮೆಯಾಗಲಿದೆ ಎಂದು ಕಂಪನಿ ಹೇಳಿದೆ. ಆದ್ರೆ ಎಚ್ ಡಿ ಎಫ್ ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಇಎಂಐ ಪಾವತಿ ಮಾಡುವ ಗ್ರಾಹಕರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಆಯ್ದ ಸ್ಮಾರ್ಟ್ಫೋನ್ ಗಳಿಗೆ ಈ ಸೌಲಭ್ಯವನ್ನು ಅಮೆಜಾನ್ ನೀಡ್ತಿದೆ.
ಕಾರು ಪ್ರಿಯರಿಗೆ ಗುಡ್ ನ್ಯೂಸ್: ಮಾರುತಿ ಸುಜುಕಿಯಿಂದ ಗ್ರಾಹಕರಿಂದ ಫೆಬ್ರವರಿ ಧಮಕಾ….!
ಉದಾಹರಣೆ ಮೂಲಕ ವಿವರಿಸುವುದಾದ್ರೆ 24 ಸಾವಿರ ರೂಪಾಯಿ ಮೌಲ್ಯದ ಸ್ಮಾರ್ಟ್ಫೋನ್ ಗೆ ಗ್ರಾಹಕರು ಆರು ತಿಂಗಳವರೆಗೆ ಪ್ರತಿ ತಿಂಗಳು 4 ಸಾವಿರ ಇಎಂಐ ಪಾವತಿ ಮಾಡಬೇಕಾಗುತ್ತದೆ. ಆದ್ರೆ ಅಡ್ವಾಂಟೇಜ್ ನೋ ಕಾಸ್ಟ್ ಇಎಂಐ ಅಡಿ ಬರುವ ಗ್ರಾಹಕರು 12 ತಿಂಗಳವರೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಪಾವತಿ ಮಾಡಬೇಕು.
ಈ ಸೌಲಭ್ಯ ಐಫೋನ್ 12 ಮಿನಿ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 21, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 31 ಎಸ್, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 51, ಒಪ್ಪೊ ಎ 15, ಒಪ್ಪೊ ಎ 1 ಕೆ, ಒಪ್ಪೊ ಎಫ್ 17, ಒಪ್ಪೊ ಎಫ್ 17 ಪ್ರೊಗೆ ಲಭ್ಯವಿದೆ.