ಅಮೇಜ಼ಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಭಾರತದಲ್ಲಿ ಚಾಲ್ತಿಯಲ್ಲಿದ್ದು, ಗ್ರಾಹಕರಿಗೆ ಬಹಳಷ್ಟು ಉತ್ಪನ್ನಗಳ ಮೇಲೆ ಒಳ್ಳೆ ಆಫರ್‌ಗಳು ಸಿಗಬಹುದು.
ಇದೇ ಸೇಲ್ ಇವೆಂಟ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ 40% ರಿಯಾಯಿತಿ ನೀಡಲಾಗುತ್ತಿದ್ದು, ಬ್ಯಾಂಕ್‌ಗಳ ವಿಶೇಷ ಆಫರ್‌ಗಳು ಹಾಗೂ ಇತರೆ ಡೀಲ್‌ಗಳು ಸಹ ಸೇರಿ ಗ್ರಾಹಕರಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಇದೇ ವೇಳೆ, 15,000ರೂ ಒಳಗೆ ಸಿಗಬಲ್ಲ ಬೆಸ್ಟ್ ಸ್ಮಾರ್ಟ್‌ಫೋನ್‌ಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ.
ರೆಡ್ಮಿ 10 ಪ್ರೈಂ
ಅಮೇಜ಼ಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ರೆಡ್ಮಿ 10 ಪ್ರೈಂ 12,499 ರೂ.ಗಳಿಗೆ ಸಿಗುತ್ತಿದೆ. ಈ ಸ್ಮಾರ್ಟ್‌ಫೋನ್ ಎಕ್ಸ್‌ಚೇಂಜ್ ಆಫರ್‌ನೊಂದಿಗೆ ಸಿಗಲಿದ್ದು, ನಿಮಗೆ ಮೂರು ಬಣ್ಣಗಳ ಆಯ್ಕೆ ಇರಲಿದೆ. 4ಜಿಬಿ, 64ಜಿಬಿ ಸ್ಮರಣೆಯೊಂದಿಗೆ ಬರುವ ಈ ಫೋನ್‌ನಲ್ಲಿ 90ಎಚ್‌ಜ಼ಡ್ ಡಿಸ್ಪ್ಲೇ ಇರಲಿದ್ದು, ದೊಡ್ಡದಾದ 6,000 ಎಂಎಎಚ್ ಬ್ಯಾಟರಿ ಇದೆ.
ವಿದ್ಯಾರ್ಥಿನಿಗೆ ಹೊಡೆದ ಶಿಕ್ಷಕಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ, 10 ಸಾವಿರ ರೂ. ದಂಡ
ರಿಯಾಲ್ಮಿ ನಾರ್ಜ಼ೋ 50ಎ
ರೆಡ್ಮಿ 10 ಪ್ರೈಂ ನೇರ ಪೈಪೋಟಿದಾರನಾದ ರಿಯಾಲ್ಮಿ ನಾರ್ಜ಼ೋವನ್ನೂ ಸಹ ಗ್ರಾಹಕರೊ ಒಮ್ಮೆ ಚೆಕ್ ಮಾಡಬಹುದು. 128ಜಿಬಿ ಆಂತರಿಕ ಸ್ಮರಣಾ ಶಕ್ತಿ ಹೊಂದಿರುವ ಈ ಫೋನ್‌ನ ಬೆಲೆಯೂ 12,499 ರೂ. ಇದೆ. ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾಗಳಿದ್ದು, 6,000 ಎಂಎಎಚ್ ಬ್ಯಾಟರಿ ಮತ್ತು ಎಚ್‌ಡಿ+ ಡಿಸ್ಪ್ಲೇ ಈ ಫೋನಿನಲ್ಲಿ ಇವೆ. ನೀಲಿ ಮತ್ತು ಹಸಿರು ಬಣ್ಣಗಳ ನಡುವೆ ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಸ್ಯಾಮ್ಸಂಗ್ ಗ್ಯಾಲಾಕ್ಸಿ ಎ03ಎಸ್
ನೀವು ಸ್ಯಾಮ್ಸಂಗ್ ಫ್ಯಾನ್ ಆಗಿದ್ದಲ್ಲಿ, ಈ ಫೋನ್ ನಿಮಗೆ 10,990 ರೂ.ಗೆ ಮೇಲ್ಕಂಡ ಸೇಲ್ ಮೂಲಕ ಸಿಗುತ್ತಿದೆ. 3ಜಿಬಿ, 32ಜಿಬಿ ಸ್ಮರಣಾ ಸಾಮರ್ಥ್ಯದ ಈ ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ವ್ಯವಸ್ಥೆ ಇದೆ. ಗ್ಯಾಲಾಕ್ಸಿ ಎ03ಯಲ್ಲಿ 5,000ಎಂಎಎಚ್ ಬ್ಯಾಟರಿ ಮತ್ತು ಎಚ್‌ಡಿ+ ಡಿಸ್ಪ್ಲೇ ಸಹ ಇವೆ.
ಟೆಕ್ನೋ ಸ್ಪಾರ್ಕ್ 7
ರೆಡ್ಮೀ ಮತ್ತು ರಿಯಾಲ್ಮಿಯಷ್ಟು ಜನಪ್ರಿಯ ಬ್ರಾಂಡ್ ಅಲ್ಲದೇ ಇದ್ದರೂ ಸಹ ಟೆಕ್ನೋ ಕಳೆದ ಕೆಲ ವರ್ಷಗಳಿಂದ ಕಣ್ಮನ ಸೆಳೆಯುವ ಒಂದಷ್ಟು ಫೋನ್‌ಗಳನ್ನು ಹೊರತಂದಿದೆ. ಎಂಟ್ರಿ-ಲೆವೆಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಿಟ್ಟಿರುವ ಟೆಕ್ನೋದ ಈ ಮಾಡೆಲ್‌ನಲ್ಲಿ 2ಜಿಬಿ, 32ಜಿಬಿ ಸ್ಮರಣಾ ಶಕ್ತಿ ಇದ್ದು, ಹಿಂಬದಿಯಲ್ಲಿ ಅವಳಿ ಕ್ಯಾಮೆರಾ ವ್ಯವಸ್ಥೆ ಇದೆ. 7,699 ರೂ.ಗಳಿಗೆ ಮಾರಾಟವಾಗುತ್ತಿರುವ ಟೆಕ್ನೋ ಸ್ಪಾರ್ಕ್ 7ರ ಮೇಲೆ ಅಮೇಜ಼ಾನ್ ಕೂಪನ್ ಬಳಸಿಕೊಂಡು 200 ರೂ.ಗಳ ರಿಯಾಯಿತಿಯನ್ನು ಗ್ರಾಹಕರು ಪಡೆಯಬಹುದಾಗಿದೆ.
ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಂ32
ಪಟ್ಟಿಯಲ್ಲಿ ಸ್ಯಾಮ್ಸಂಗ್‌ನ ಮತ್ತೊಂದು ಫೋನ್ ಆಗಿರುವ ಗ್ಯಾಲಾಕ್ಸಿ ಎಂ32 ಗ್ಯಾಲಾಕ್ಸಿ ಎ03ಗೆ ಹೋಲಿಕೆ ಮಾಡಿದಲ್ಲಿ ದೊಡ್ಡ ಮಟ್ಟದಲ್ಲಿ ಅಪ್‌ಗ್ರೇಡ್‌ಗಳನ್ನು ಕೊಡಲಾಗಿದೆ. ಅಮೇಜ಼ಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ 12,999 ರೂ.ಗೆ ಸಿಗುವ ಈ ಫೋನ್ 4ಜಿಬಿ, 64ಜಿಬಿ ಸ್ಮರಣಾ ಸಾಮರ್ಥ್ಯ ಹೊಂದಿದ್ದು, 6ಜಿಬಿ, 128 ಜಿಬಿ ಆಯ್ಕೆಯನ್ನೂ ಒಳಗೊಂಡಿದ್ದು, ಅದರ ಬೆಲೆ 14,999 ರೂ.ಗಳು. ಫೀಚರ್‌ಗಳ ವಿಚಾರದಲ್ಲಿ, 90ಎಚ್‌ಜ಼ಡ್ ಫುಲ್ ಎಚ್‌ಡಿ ಡಿಸ್ಪ್ಲೇ, ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳು, 6,000 ಎಂಎಎಚ್ ಬ್ಯಾಟರಿ ಮತ್ತು ಡ್ಯುಯಲ್-ಸಿಮ್ ಕಾರ್ಡ್ ಬೆಂಬಲವನ್ನೂ ಸಹ ಈ ಫೋನ್ ಹೊಂದಿದೆ.
ನೋಕಿಯಾ ಜಿ20
ಪಟ್ಟಿಯಲ್ಲಿರುವ ಕೊನೆಯ ಮಾಡೆಲ್ ಆದ ನೋಕಿಯಾ ಜಿ20ಯಲ್ಲಿ ಆಂಡ್ರಾಯ್ಡ್‌ನ ಯುಐ ಇದೆ. ಈ ಫೋನ್ ಸದ್ಯದ ಮಟ್ಟಿಗೆ 12,490 ರೂ.ಗೆ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ಅಮೇಜ಼ಾನ್ ಕೂಪನ್ ಮೂಲಕ 500 ರೂ.ಗಳ ರಿಯಾಯಿತಿ ಸಿಗಲಿದೆ. ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳು, 5050ಎಂಎಎಚ್ ಬ್ಯಾಟರಿ ಮತ್ತು ಎಚ್‌ಡಿ+ ಡಿಸ್ಪ್ಲೇ ಆಯ್ಕೆಗಳನ್ನು ಈ ಫೋನ್ ಹೊಂದಿದೆ.