ವಿಶ್ವದ ಅತಿದೊಡ್ಡ ಆನ್‌ಲೈನ್ ಶಾಪಿಂಗ್ ಕಂಪನಿಯಾದ ಅಮೆಜಾನ್ ಮೂಲಕ ಯಾವುದೇ ವ್ಯಕ್ತಿ ಕಡಿಮೆ ಸಮಯದಲ್ಲಿ ಹೆಚ್ಚು ಹಣವನ್ನು ಗಳಿಸಬಹುದು. ನಿರುದ್ಯೋಗಿಗಳಿಗೆ ಇದು ಉತ್ತಮ ಆಯ್ಕೆ. ಅಮೆಜಾನ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಅಥವಾ ಅರೆಕಾಲಿಕ ಕೆಲಸವನ್ನು ಮಾಡಬಹುದು.
ಅಮೆಜಾನ್‌ನೊಂದಿಗೆ ವಿದ್ಯಾರ್ಥಿಗಳು ಅರೆಕಾಲಿಕ ಕೆಲಸ ಮಾಡಿ ಹಣ ಸಂಪಾದಿಸುತ್ತಿದ್ದಾರೆ. ಡಿಲೆವರಿ ಬಾಯ್ ರೂಪದಲ್ಲಿ ನೀವು ಕೆಲಸ ಮಾಡಬಹುದು. ಅಮೆಜಾನ್ ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ಡಿಲೆವರಿ ನೀಡುತ್ತದೆ.
ಪ್ರತಿ ದಿನ ಲಕ್ಷಾಂತರ ಡಿಲೆವರಿ ಇರುತ್ತದೆ. ಡಿಲೆವರಿ ಬಾಯ್ ದಿನದಲ್ಲಿ ಸುಮಾರು 100 ರಿಂದ 150 ಪಾರ್ಸಲ್ ತಲುಪಿಸಬೇಕಾಗುತ್ತದೆ. ಅಮೆಜಾನ್ ಕೇಂದ್ರದಿಂದ ಸುಮಾರು 10–15 ಕಿ.ಮೀ ದೂರದವರೆಗೆ ಪಾರ್ಸಲ್ ತಲುಪಿಸಬೇಕು. ಅಮೆಜಾನ್ ಡೆಲಿವರಿ ಹುಡುಗರು 100-150 ಪಾರ್ಸಲ್ ಗಳನ್ನು ದಿನದಲ್ಲಿ ಸುಮಾರು 4 ಗಂಟೆಗಳಲ್ಲಿ ತಲುಪಿಸುತ್ತಾರೆ.
ಶಾಲೆ ಅಥವಾ ಕಾಲೇಜು ಪಾಸ್ ಆಗಿರುವ ಪ್ರಮಾಣ ಪತ್ರ ಬೇಕು ವಿತರಣೆಗಾಗಿ ಬೈಕು ಅಥವಾ ಸ್ಕೂಟರ್ ಹೊಂದಿರಬೇಕು. ಬೈಕು ಅಥವಾ ಸ್ಕೂಟರ್ ವಿಮೆ ನೋಂದಣಿ ಪ್ರಮಾಣ ಪತ್ರವಿರಬೇಕು.
ಇಮೇಲ್ ಐಡಿ ಮೂಲಕ ಅಮೆಜಾನ್‌ನಲ್ಲಿ ಡೆಲಿವರಿ ಬಾಯ್ ಕೆಲಸ ಪಡೆಯಲು ನೀವು ಅರ್ಜಿ ಸಲ್ಲಿಸಬಹುದು. ಅಮೆಜಾನ್‌ನ ಸೈಟ್ https://logistics.amazon.in/applynow ನಲ್ಲಿ ಅರ್ಜಿ ಸಲ್ಲಿಸಬಹುದು. ಇದಲ್ಲದೆ, ಅಮೆಜಾನ್‌ನ ಯಾವುದೇ ಕೇಂದ್ರಕ್ಕೆ ಭೇಟಿ ನೀಡಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಬಹುದು.
ಅಮೆಜಾನ್ ಡೆಲಿವರಿ ಬಾಯ್‌ಗೆ ಪ್ರತಿ ತಿಂಗಳು ಸಂಬಳ ಸಿಗುತ್ತದೆ. ಆದರೆ ಪೆಟ್ರೋಲ್ ಬೆಲೆ ನೀಡುವುದಿಲ್ಲ. ಒಂದು ಉತ್ಪನ್ನ ಅಥವಾ ಪಾರ್ಸಲ್ ತಲುಪಿಸಿದ್ರೆ 15 ರಿಂದ 20 ರೂಪಾಯಿಗಳನ್ನು ಪಡೆಯಬಹುದು. ಒಬ್ಬ ವ್ಯಕ್ತಿಯು ಪ್ರತಿದಿನ 100 ಪ್ಯಾಕೇಜ್‌ಗಳನ್ನು ತಲುಪಿಸಿದರೆ, ಅವನು ತಿಂಗಳಿಗೆ 60000-70000 ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದು.