ನ್ಯೂಯಾರ್ಕ್: ಸ್ಟಾರ್ ಬಕ್ಸ್ ಕಂಪನಿ ವಾರದಲ್ಲಿ ಮೂರು ದಿನ ಕಚೇರಿಯಿಂದ ಕೆಲಸ ನಿರ್ವಹಿಸುವಂತೆ ನೌಕರರಿಗೆ ಸೂಚನೆ ನೀಡಿದೆ. ಈಗ ಅಮೆಜಾನ್ ಕಂಪನಿ ಮೇ 1 ರಿಂದ ಜಾರಿಗೆ ಬರುವಂತೆ ನೌಕರರು ವಾರದಲ್ಲಿ ಮೂರು ದಿನ ಕಚೇರಿಯಿಂದ ಕೆಲಸ ಮಾಡುವಂತೆ ತಿಳಿಸಿದೆ.
ಈ ಕುರಿತಾಗಿ ಪ್ರಸ್ತುತ ಇರುವ ನಿಯಮದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ತಮ್ಮ ತಂಡ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವರು ಎಂದು ಕಂಪನಿಯ ಸಿಇಒ ಆಂಡಿ ಜಾಸ್ಸಿ ಅವರು ಉದ್ಯೋಗಿಗಳಿಗೆ ಪತ್ರ ಬರೆದಿದ್ದು, ಮೇ 1 ರಿಂದ ಜಾರಿಗೆ ಬರುವಂತೆ ವಾರದಲ್ಲಿ ಮೂರು ದಿನ ಕಚೇರಿಯಿಂದ ಕೆಲಸ ಮಾಡುವಂತೆ ಹೇಳಿದ್ದಾರೆ. ಅಮೆಜಾನ್ ತನ್ನ ಕಾರ್ಪೊರೇಟ್ ಮತ್ತು ಟೆಕ್ ಉದ್ಯೋಗಿಗಳು ವಾರಕ್ಕೆ ಕನಿಷ್ಠ ಮೂರು ದಿನಗಳಾದರೂ ಕಚೇರಿಗೆ ಮರಳಲು ಬಯಸುತ್ತದೆ ಎಂದು ಆಂಡಿ ಜಾಸ್ಸಿ ಶುಕ್ರವಾರ ಕಾರ್ಮಿಕರಿಗೆ ಜ್ಞಾಪಕ ಪತ್ರದಲ್ಲಿ ತಿಳಿಸಿದ್ದಾರೆ.
ಹೊಸ ರಿಟರ್ನ್-ಟು-ಆಫೀಸ್ ಅವಶ್ಯಕತೆಗೆ ಸಣ್ಣ ವಿನಾಯಿತಿ ಇರುತ್ತದೆ ಮತ್ತು ಬದಲಾವಣೆಯನ್ನು ಮೇ 1 ರಿಂದ ಜಾರಿಗೆ ತರಲು Amazon ಯೋಜಿಸಿದೆ ಎಂದು ಜಾಸ್ಸಿ ಹೇಳಿದ್ದಾರೆ.