ಈ ಕಾರಣಕ್ಕೆ ಮೊಬೈಲ್ ಆಪ್ ʼಐಕಾನ್ʼ ಬದಲಾವಣೆ ಮಾಡಿದ ಅಮೆಜಾನ್….! 03-03-2021 12:39PM IST / No Comments / Posted In: Latest News, International ಆನ್ಲೈನ್ ಮಾರುಕಟ್ಟೆಯ ದೈತ್ಯ ಅಮೆಜಾನ್ ಸಾಮಾಜಿಕ ಜಾಲತಾಣದಲ್ಲಿ ವಿರೋಧ ಎದುರಿಸಿದ ಬಳಿಕ ಕೊನೆಗೂ ತನ್ನ ಫೋನ್ ಲೋಗೋವನ್ನ ಬದಲಾಯಿಸಿದೆ. ಅಮೆಜಾನ್ ಕೆಲ ದಿನಗಳ ಹಿಂದಷ್ಟೇ ಪೋನ್ ಅಪ್ಲಿಕೇಶನ್ ಚಿಹ್ನೆಯನ್ನ ಬದಲಾಯಿಸಿತ್ತು. ಇದರಲ್ಲಿ ಕಂದು ಬಣ್ಣದ ಬಾಕ್ಸ್ ಆಕೃತಿ ಪ್ಯಾಕೆಜಿಂಗ್ ಬಾಕ್ಸನ್ನು ಪ್ರತಿನಿಧಿಸುತ್ತಿತ್ತು. ನೀಲಿ ಬಣ್ಣದ ಪುಟ್ಟ ಸ್ಟ್ರಿಪ್ ಪ್ಯಾಕೇಜಿಂಗ್ ಟೇಪ್ನ್ನು ಪ್ರತಿನಿಧಿಸುತ್ತಿತ್ತು. ಹಾಗೂ ಎಂದಿನಂತೆ ಬಾಣದ ಗುರುತನ್ನ ಇಡಲಾಗಿತ್ತು. ಆದರೆ ಈ ರೀತಿ ಲೋಗೋ ಬದಲಾವಣೆ ಮಾಡಿದ ಕೆಲವೇ ವಾರಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ವಿರೋಧದ ಅಲೆ ಎದ್ದಿದೆ. ನೀಲಿ ಬಣ್ಣದ ಸ್ಟ್ರಿಪ್ ಹಿಟ್ಲರ್ ಗಡ್ಡದಂತಿದೆ ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ. ಈ ಮಾತನ್ನ ಕೇಳಿದ ಬಳಿಕ ಅಮೆಜಾನ್ ನೀಲಿ ಬಣ್ಣದ ಟೇಪ್ನ ಆಕೃತಿ ಬದಲಾಯಿಸಿದೆ. ಕೆಲ ಸಮಯದ ಹಿಂದಷ್ಟೇ ಮಿಂತ್ರಾ ಕೂಡ ಲೋಗೋ ವಿವಾದವನ್ನ ಎದುರಿಸಿತ್ತು. ಮಿಂತ್ರಾದ ಲೋಗೋ ಮಹಿಳೆಯರಿಗೆ ಅವಮಾನ ಮಾಡುತ್ತಿದೆ ಎಂಬ ಆರೋಪದ ಬಳಿಕ ಲೋಗೋ ಬದಲಾವಣೆ ಮಾಡಲಾಗಿತ್ತು. https://twitter.com/alexhern/status/1366396140116131842 NEW: @amazon changes their app logo after comparisons are made to Hitler 🧚♀️ pic.twitter.com/8QAjzQ5HwC — the big fellow (@borderfox116) March 2, 2021