ನವದೆಹಲಿ: ಜನರಿಗೆ ಪಾಕೆಟ್ ನಲ್ಲಿ ಇಟ್ಟುಕೊಂಡು ಹೋಗಲು ಅನುಕೂಲವಾಗುವ ದೃಷ್ಟಿಯಿಂದ ಯುನೀಕ್ ಐಡೆಂಟಿಟಿ ಅಥಾರಿಟಿ ಆಫ್ ಇಂಡಿಯಾ( ಯುಐಡಿಎ) ಹೊಸ ಮಾದರಿಯ ಆಧಾರ ಕಾರ್ಡ್ ಗಳನ್ನು ಒದಗಿಸುತ್ತಿದೆ.
ಪಿವಿಸಿ, ಎಟಿಎಂ ಡೆಬಿಟ್ ಕಾರ್ಡ್ ಅಳತೆಯ ಕಾರ್ಡ್ ಗಳನ್ನು ಒದಗಿಸಲಾಗುತ್ತಿದೆ. ಆನ್ ಲೈನ್ ನಲ್ಲಿ 50 ರೂ. ಶುಲ್ಕ ಪಾವತಿಸಿ ಐದು ಕೆಲಸದ ದಿನಗಳ ಒಳಗೆ ನಿಮ್ಮ ಮನೆ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ನಲ್ಲಿ ಕಾರ್ಡ್ ಪಡೆಯಬಹುದಾಗಿದೆ.
ಯುಐಡಿಎ ಈ ಕುರಿತು ಟ್ವೀಟ್ ಮಾಡಿದೆ. ಅಧಿಕೃತ ವೆಬ್ ಸೈಟ್ ನಲ್ಲಿ ಪಿವಿಸಿ ಆಧಾರ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಈ ಲಿಂಕ್ ಕೂಡ ಬಳಸಬಹುದು. https://residentpvc.uidai.gov.in/order-pvcreprint
ಆಧಾರ ಕಾರ್ಡ್ ಗೆ ಮೊಬೈಲ್ ನಂಬರ್ ಅಪ್ ಡೆಟ್ ಆಗದೇ ಇದ್ದರೂ ಈ ಸೌಲಭ್ಯ ಲಭ್ಯವಾಗಲಿದೆ. ಮನೆಯ ಒಬ್ಬ ವ್ಯಕ್ತಿಯ ಮೊಬೈಲ್ ನಂಬರ್ ಮೂಲಕ ಕುಟುಂಬದ ಎಲ್ಲ ಸದಸ್ಯರಿಗೂ ಪಿವಿಸಿ ಆಧಾರ್ ಕಾರ್ಡ್ ಆರ್ಡರ್ ಮಾಡಬಹುದು.