ನವದೆಹಲಿ: ಶೀಘ್ರವೇ ಟೋಲ್ ಪ್ಲಾಜಾ ಗಳಲ್ಲಿ ಶುಲ್ಕ ಸಂಗ್ರಹಕ್ಕೆ ಬ್ರೇಕ್ ಹಾಕಲಾಗುವುದು ಎಂದು ರಸ್ತೆ ಸಾರಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ಇನ್ನು ಒಂದು ವರ್ಷದಲ್ಲಿ ಜಿಪಿಎಸ್ ಮೂಲಕ ಟೋಲ್ ಸಂಗ್ರಹ ಮಾಡಲಾಗುವುದು. ವಾಹನಗಳ ಜಿಪಿಎಸ್ ಮೂಲಕ ಶುಲ್ಕ ಸಂಗ್ರಹಿಸಲಾಗುವುದು. ಈಗ ಶೇಕಡ 93 ರಷ್ಟು ವಾಹನಗಳಲ್ಲಿ ಫಾಸ್ಟ್ ಟ್ಯಾಗ್ ಇದೆ. ಉಳಿದ ವಾಹನಗಳು ಟೋಲ್ ಗಳಲ್ಲಿ ಡಬಲ್ ಶುಲ್ಕ ಪಾವತಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಒಂದು ವರ್ಷದೊಳಗೆ ದೇಶಾದ್ಯಂತ ಟೋಲ್ ಪ್ಲಾಜಾ ಬೂತ್ಗಳನ್ನು ಸರ್ಕಾರ ತೆಗೆದುಹಾಕಲಿದೆ. ಎಲ್ಲಾ ರಸ್ತೆಗಳು ಮತ್ತು ಹೆದ್ದಾರಿಗಳು ಶೀಘ್ರದಲ್ಲೇ ಟೋಲ್ ಪ್ಲಾಜಾಗಳಿಂದ ಮುಕ್ತವಾಗುತ್ತವೆ. ಟೋಲ್ ಪ್ಲಾಜಾಗಳನ್ನು ಬದಲಿಸಲು ಸಂಪೂರ್ಣ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹವನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.