ಸ್ಕೋಡಾ ಆಟೋ ಇಂಡಿಯಾ ಭಾರತೀಯ ಮಾರುಕಟ್ಟೆಗೆ ಮಧ್ಯಮ ಗಾತ್ರದ ಸ್ಲಾವಿಯಾ ಬಿಡುಗಡೆ ಮಾಡಿದೆ. ಇದು ನೋಡಲು ಆಕರ್ಷಕವಾಗಿದೆ. ಸ್ಲಾವಿಯಾವನ್ನು ಯುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ. ಕಂಪನಿ ಇದ್ರ ಬೆಲೆಯನ್ನು ಘೋಷಿಸಿಲ್ಲ. ಹೊಸ ಸ್ಲಾವಿಯಾ ಭಾರತದಲ್ಲಿ ತಯಾರಾಗ್ತಿದೆ.
ಸ್ಕೋಡಾ ಇಂಡಿಯಾ ಹೊಸ ಕಾರಿನ ಬುಕಿಂಗ್ ಪ್ರಾರಂಭವಾಗಿದೆ. ಹೊಸ ಸ್ಲಾವಿಯಾಕ್ಕೆ ಡಿಜಿಟಲ್ ಕಾಕ್‌ಪಿಟ್‌ನೊಂದಿಗೆ ಬರುವ ಸಂಪೂರ್ಣ ಡಿಜಿಟಲ್ ಉಪಕರಣ ಕ್ಲಸ್ಟರ್ ನೀಡಲಾಗಿದೆ. ಕ್ಯಾಬಿನ್‌ಗೆ ಎರಡು ಬಣ್ಣಗಳೊಂದಿಗೆ ಪ್ರೀಮಿಯಂ ಥೀಮ್ ನೀಡಲಾಗಿದೆ. ಹಿಂಭಾಗದಲ್ಲಿ ಎಸಿ ವೆಂಟ್‌ಗಳು, ವೈರ್‌ಲೆಸ್ ಚಾರ್ಜಿಂಗ್ ಮತ್ತು ಡಿಜಿಟಲ್ ಕಾಕ್‌ಪಿಟ್‌ನಂತಹ ವೈಶಿಷ್ಟ್ಯಗಳನ್ನು ನೀಡಲಾಗಿದೆ.
ಸ್ಕೋಡಾ ಸ್ಲಾವಿಯಾವನ್ನು ಆಕ್ಟಿವ್, ಆಂಬಿಷನ್ ಮತ್ತು ಸ್ಟೈಲ್ 3 ರೂಪಾಂತರಗಳಲ್ಲಿ ನೀಡಲಾಗುವುದು. 5 ವಿಭಿನ್ನ ಬಣ್ಣಗಳಲ್ಲಿ ಕಾರು ಲಭ್ಯವಿದೆ. ಸ್ಕೋಡಾ ಸ್ಲಾವಿಯಾ ಮಾರುತಿ ಸುಜುಕಿ ಸಿಯಾಜ್, ಹ್ಯುಂಡೈ ವೆರ್ನಾ ಮತ್ತು ಹೋಂಡಾ ಸಿಟಿಯಂತಹ ಕಾರುಗಳಿಗೆ ಟಕ್ಕರ್ ನೀಡಲಿದೆ. 6 ಏರ್‌ಬ್ಯಾಗ್‌ಗಳು, ISOFIX, TPMS, ಹಿಲ್ ಹೋಲ್ಡ್ ಕಂಟ್ರೋಲ್, ABS ಜೊತೆಗೆ EBD ಮತ್ತು ESC ನಂತಹ ಹಲವು ವೈಶಿಷ್ಟ್ಯಗಳಿವೆ.
1.0-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್‌ಗಳೊಂದಿಗೆ ನೀಡಲಾಗುತ್ತಿದೆ.
ಸ್ಕೋಡಾ ಆಟೋ ಇಂಡಿಯಾದ ಹೊಸ ಸ್ಲಾವಿಯಾ ಮಧ್ಯಮ ಗಾತ್ರದ ಸೆಡಾನ್ 4541 ಎಂಎಂ ಉದ್ದ ಮತ್ತು 1750 ಎಂಎಂ ಅಗಲವನ್ನು ಹೊಂದಿದೆ. ಆದರೆ ಕಾರಿನ ಎತ್ತರವನ್ನು 1487 ಎಂಎಂ ನಲ್ಲಿ ಇರಿಸಲಾಗಿದೆ. ರಾಪಿಡ್‌ಗೆ ಹೋಲಿಸಿದರೆ, ಎಲ್ಲಾ ಹೊಸ ಸ್ಲಾವಿಯಾ 128 ಎಂಎಂ ಉದ್ದ, 53 ಎಂಎಂ ಅಗಲ ಮತ್ತು ಎತ್ತರವಾಗಿದೆ. ಸ್ಲಾವಿಯಾದ ವೀಲ್‌ಬೇಸ್ ಕೂಡ ರಾಪಿಡ್‌ಗಿಂತ 99 ಎಂಎಂ ಉದ್ದವಾಗಿದೆ. ಹೊಸ ಕಾರು ಮೊದಲ ಆಕ್ಟೇವಿಯಾಕ್ಕಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿದೆ.