
ದೇಶದಲ್ಲಿ ಹೆಚ್ಚಾಗುತ್ತಿರುವ ಕೊರೊನಾವನ್ನೇ ವಂಚಕರು ತಮ್ಮ ಬಂಡವಾಳವನ್ನಾಗಿ ಬಳಸಿಕೊಳ್ಳುತ್ತಿದ್ದು, ಉಚಿತ ಕೋವಿಡ್-19 ಟೆಸ್ಟ್ ಮಾಡುವುದಾಗಿ ಸರ್ಕಾರದ ವತಿಯಿಂದಲೇ ಕಳಿಸಲಾಗುತ್ತಿದೆ ಎಂಬಂತೆ ಬಿಂಬಿಸುವ ಇ-ಮೇಲ್ ರವಾನಿಸಿ ವಂಚನೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಈಗಾಗಲೇ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತದ ಸೈಬರ್ ಸೆಕ್ಯೂರಿಟಿ ಏಜೆನ್ಸಿ ಸಹ ಇದೇ ರೀತಿಯ ಎಚ್ಚರಿಕೆಯನ್ನು ನೀಡಿದೆ. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ ಅಹ್ಮದಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿನ ತನ್ನ ಬ್ಯಾಂಕ್ ಗ್ರಾಹಕರ ಖಾತೆಗೆ ವಂಚಕರು ಖಾತೆ ಹಾಕುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಹೀಗಾಗಿ ಬ್ಯಾಂಕ್ ಗ್ರಾಹಕರೂ ಸೇರಿದಂತೆ ಸಾರ್ವಜನಿಕರು ತಮಗೆ ಬರುವ ಇಂತಹ ಇ-ಮೇಲ್ ಗಳ ಮೇಲೆ ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬಾರದು. ಒಂದೊಮ್ಮೆ ಅಪ್ಪಿತಪ್ಪಿ ಕ್ಲಿಕ್ ಮಾಡಿದರೆ ವೈಯಕ್ತಿಕ ಮಾಹಿತಿ ಜೊತೆಗೆ ಹಣವನ್ನೂ ಕಳೆದುಕೊಳ್ಳುವುದು ನಿಶ್ಚಿತ.