ಕೊರೊನಾ ಮಧ್ಯೆ ಫೆಬ್ರವರಿ ಒಂದರಂದು ಮಂಡಿಸಲಾಗ್ತಿರುವ ಕೇಂದ್ರ ಬಜೆಟ್ ಮೇಲೆ ಎಲ್ಲರ ಕಣ್ಣಿದೆ. ಸರ್ಕಾರದ ಬಜೆಟ್ ಮೇಲೆ ಜನಸಾಮಾನ್ಯರ ನಿರೀಕ್ಷೆ ಹೆಚ್ಚಿದೆ. ಮನೆಯಲ್ಲಿ ಕೆಲಸ ಮಾಡುವ ನೌಕರರಿಗೆ ಬಜೆಟ್ ನಲ್ಲಿ ಸ್ವಲ್ಪ ನೆಮ್ಮದಿ ಸುದ್ದಿ ಸಿಗುವ ಸಾಧ್ಯತೆಯಿದೆ. 2021ರ ಬಜೆಟ್ ನಲ್ಲಿ ವರ್ಕ್ ಫ್ರಂ ಹೋಂ ಮಾಡುವವರಿಗೆ ತೆರಿಗೆ ವಿನಾಯಿತಿ ಘೋಷಿಸುವ ಸಾಧ್ಯತೆಯಿದೆ ಎಂದು ಮಾಧ್ಯಮಗಳ ವರದಿ ಮಾಡಿವೆ.
ಕೊರೊನಾ ವೈರಸ್ ಕಾರಣದಿಂದಾಗಿ ಅನೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ಅವಕಾಶ ನೀಡಿವೆ. ನೌಕರರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅನೇಕ ಕಂಪನಿಗಳು ಈಗ್ಲೂ ವರ್ಕ್ ಫ್ರಂ ಹೋಮ್ ಗೆ ಅವಕಾಶ ನೀಡಿವೆ. ಮನೆಯಲ್ಲಿ ಕೆಲಸ ಮಾಡುವವರ ಖರ್ಚು ಹೆಚ್ಚಾಗಿದೆ. ವೇಗದ ಇಂಟರ್ನೆಟ್, ಪವರ್ ಬ್ಯಾಕಪ್, ಎಲೆಕ್ಟ್ರಾನಿಕ್ ಪರಿಕರಗಳು, ಹವಾನಿಯಂತ್ರಕ ಹೀಗೆ ಅನೇಕ ಸೌಲಭ್ಯಗಳಿಗಾಗಿ ನೌಕರರು ಹಣ ಖರ್ಚು ಮಾಡ್ತಿದ್ದಾರೆ. ಡಬ್ಲ್ಯೂಎಫ್ ಎಚ್ ಜೊತೆ ಕೆಲಸ ಮಾಡುವ ಕೆಲ ದೊಡ್ಡ ಕಂಪನಿಗಳು ನೌಕರರ ಈ ಎಲ್ಲ ಸೌಲಭ್ಯಕ್ಕೆ ಭತ್ಯೆಯನ್ನು ನೀಡಿವೆ.
ಆದ್ರೆ ಬಹುತೇಕ ಖಾಸಗಿ ಕಂಪನಿ ನೌಕರರ ಮೇಲೆ ಈ ಖರ್ಚಿನ ಹೊಣೆ ಬಿದ್ದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನೌಕರರಿಗೆ ಬಜೆಟ್ ನಲ್ಲಿ ತೆರಿಗೆ ವಿನಾಯಿತಿ ನೀಡಬಹುದು ಎಂಬ ನಿರೀಕ್ಷೆಯಿದೆ. ಆದ್ರೆ ಸರ್ಕಾರದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.