
ಇಂದು ಅಕ್ಷಯ ತೃತೀಯ. ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ ಮಹತ್ವದ ಸ್ಥಾನವಿದೆ. ಶುಭ ಕೆಲಸಗಳನ್ನು ಇಂದು ಮಾಡಲಾಗುತ್ತದೆ. ಚಿನ್ನ ಅಥವಾ ಚಿನ್ನದ ಆಭರಣಗಳನ್ನು ಖರೀದಿಸಲು ಇದು ಒಳ್ಳೆ ದಿನವಾಗಿದೆ. ಅಕ್ಷಯ ತೃತೀಯದಂದು ಪೇಟಿಎಂ ಉತ್ತಮ ಆಫರ್ ನೀಡ್ತಿದೆ. 2100 ರೂಪಾಯಿ ಚಿನ್ನವನ್ನು ಉಚಿತವಾಗಿ ಪಡೆಯುವ ಅವಕಾಶ ನೀಡ್ತಿದೆ. ಆದರೆ ಇದಕ್ಕೆ ಕೆಲ ಷರತ್ತುಗಳು ಅನ್ವಯಿಸುತ್ತವೆ.
ಪೇಟಿಎಂ ಅಕ್ಷಯ ತೃತೀಯದಂದು ಹೆಚ್ಚುವರಿ ಗೋಲ್ಡ್ ಬ್ಯಾಕ್ ಆಫರ್ ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಚಿನ್ನ ಖರೀದಿ ಮಾಡಿದ್ರೆ ಹೆಚ್ಚುವರಿ 2100 ರೂಪಾಯಿಗಳ ಚಿನ್ನ ಹಾಗೂ ಶೇಕಡಾ 3 ರಷ್ಟು ಕ್ಯಾಶ್ಬ್ಯಾಕ್ ಸಿಗುತ್ತದೆ. ಕ್ಯಾಶ್‌ಬ್ಯಾಕ್‌ಗಾಗಿ ಕನಿಷ್ಠ 2000 ರೂಪಾಯಿ ಚಿನ್ನವನ್ನು ಪೇಟಿಎಂ ಪಾವತಿ ಬ್ಯಾಂಕಿನಿಂದ ಖರೀದಿಸಬೇಕಾಗುತ್ತದೆ.
ಅಕ್ಷಯ ತೃತೀಯದಂದು ಶುಭ ಫಲಕ್ಕಾಗಿ ಬೆಳಿಗ್ಗೆ ಮಾಡಿ ಈ ಕೆಲಸ
ಪೇಟಿಎಂನಲ್ಲಿ 24 ಕ್ಯಾರೆಟ್ ನ ಶೇಕಡಾ 99.9 ಶುದ್ಧ ಚಿನ್ನ ಸಿಗಲಿದೆ. ಖರೀದಿಸಿದ ಚಿನ್ನವನ್ನು ಒಂದು ಸುರಕ್ಷಿತ ಲಾಕರ್ ನಲ್ಲಿ ಇಡಲಾಗುವುದು. ಬಯಸಿದ್ರೆ ಚಿನ್ನವನ್ನು ಹೋಮ್ ಡಿಲೆವರಿ ಪಡೆಯಬಹುದು. ಪೇಟಿಎಂನ ಈ ಆಫರ್ ಮೇ 14 ರಾತ್ರಿ 11.59 ರವರೆಗೆ ಇರಲಿದೆ. ವಹಿವಾಟು ಪೂರ್ಣಗೊಂಡ 45 ದಿನಗಳಲ್ಲಿ ಆಫರ್ ಸಿಗಲಿದೆ.