ನವದೆಹಲಿ: ಭಾರ್ತಿ ಏರ್ ಟೆಲ್‌ನ ಡೇಟಾ ನೆಟ್ ವರ್ಕ್ ತಾಂತ್ರಿಕ ದೋಷದಿಂದಾಗಿ ಭಾರತದಾದ್ಯಂತ ಸುಮಾರು 5 ನಿಮಿಷಗಳ ಕಾಲ ಅಲ್ಪಾವಧಿ ತೊಂದರೆಯಾಗಿತ್ತು. ಕೆಲವೇ ನಿಮಿಷಗಳಲ್ಲಿ ನೆಟ್ ವರ್ಕ್ ಅನ್ನು ಸಂಪೂರ್ಣವಾಗಿ ಸಾಮಾನ್ಯಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಟ್ವಿಟರ್‌ನಲ್ಲಿ ಹಲವಾರು ಏರ್ ಟೆಲ್ ಬಳಕೆದಾರರು ತಮ್ಮ ಮೊಬೈಲ್ ಡೇಟಾ ಮತ್ತು ಬ್ರಾಡ್ ಬ್ಯಾಂಡ್ ಸಂಪರ್ಕವು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ ಎಂದು ದೂರಿದ್ದಾರೆ.
“ತಾಂತ್ರಿಕ ದೋಷದಿಂದಾಗಿ ಇಂದು ಬೆಳಗ್ಗೆ ನಮ್ಮ ಇಂಟರ್ನೆಟ್ ಸೇವೆಗಳು ಸುಮಾರು 5 ನಿಮಿಷಗಳ ಕಾಲ ಸ್ಥಗಿತಗೊಂಡವು. ಇದನ್ನು ತಕ್ಷಣವೇ ನಿಭಾಯಿಸಲಾಯಿತು. ಮುಂದಿನ 10 ನಿಮಿಷಗಳಲ್ಲಿ ನೆಟ್ ವರ್ಕ್ ಅನ್ನು ಸಂಪೂರ್ಣವಾಗಿ ಸಾಮಾನ್ಯಗೊಳಿಸಲಾಯಿತು. ನಮ್ಮ ಗ್ರಾಹಕರಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಎಂದು ಕಂಪನಿ ತಿಳಿಸಿದೆ.
ನೆಟ್ ವರ್ಕ್ ಸ್ಥಗಿತವನ್ನು ಪತ್ತೆಹಚ್ಚುವ ಡೌನ್ ಡಿಟೆಕ್ಟರ್, ಅಡ್ಡಿಯು ದೇಶದಾದ್ಯಂತ ಇದೆ ಎಂದು ತೋರಿಸಿದೆ. ಕಂಪನಿಯು ದೇಶಾದ್ಯಂತ 20 ಕೋಟಿ ಮೊಬೈಲ್ ಡೇಟಾ ಮತ್ತು 40 ಲಕ್ಷ ಸ್ಥಿರ ಬ್ರಾಡ್ ಬ್ಯಾಂಡ್ ಬಳಕೆದಾರರನ್ನು ಹೊಂದಿದೆ.