ನವದೆಹಲಿ: ಏರ್ಟೆಲ್ ಪ್ರಿಪೇಯ್ಡ್ ಆರಂಭಿಕ ದರವನ್ನು ಹೆಚ್ಚಳ ಮಾಡಲಾಗಿದೆ. 49 ರೂ. ಗೆ ಬದಲಾಗಿ 79 ರೂಪಾಯಿ ರೀಚಾರ್ಜ್ ಯೋಜನೆ ಜಾರಿಗೆ ತರಲಾಗಿದೆ.
ಆರಂಭಿಕ ಪ್ರೀಪೇಯ್ಡ್ ಯೋಜನೆಯನ್ನು ಶೇಕಡ 60 ರಷ್ಟು ಹೆಚ್ಚಳ ಮಾಡಲಾಗಿದೆ. 49 ರೂಪಾಯಿಯಿಂದ ಆರಂಭವಾಗುತ್ತಿದ್ದ ರೀಚಾರ್ಜ್ ಯೋಜನೆಗೆ ಬದಲಾಗಿ 79 ರೂಪಾಯಿಯ ಸ್ಮಾರ್ಟ್ ರೀಚಾರ್ಜ್ ಯೋಜನೆಯನ್ನು ಏರ್ಟೆಲ್ ಜಾರಿಗೆ ತಂದಿದೆ. ಇದರಲ್ಲಿ ಗ್ರಾಹಕರಿಗೆ ಮೊದಲಿಗಿಂತ ಹೆಚ್ಚು ಪ್ರಯೋಜನ ಸಿಗಲಿದೆ ಎನ್ನಲಾಗಿದೆ.
79 ರೂಪಾಯಿ ರೀಚಾರ್ಜ್ ಮಾಡಿದರೆ 28 ದಿನಗಳ ವ್ಯಾಲಿಡಿಟಿಯೊಂದಿಗೆ 64 ರೂಪಾಯಿ ಟಾಕ್ ಟೈಮ್ ಮತ್ತು 200 ಎಂಬಿ ಡೇಟಾ ಸಿಗಲಿದೆ. ಏರ್ ಟೆಲ್ ಜೊತೆಗೆ ಪ್ರತಿಸ್ಪರ್ಧಿ ಕಂಪನಿಗಳಾದ ರಿಲಯನ್ಸ್ ಜಿಯೋ, ವೊಡಾಪೋನ್ ಐಡಿಯಾ ಕೂಡ ತಮ್ಮ ರೀಚಾರ್ಜ್ ಪ್ಲಾನ್ ಗಳ ದರದಲ್ಲಿ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.