ತನ್ನ ಗ್ರಾಹಕರಿಗೆ ಒಂದಿಲ್ಲೊಂದು ಆಫರ್ಗಳನ್ನ ನೀಡುವ ಏರ್ಟೆಲ್ ಸಂಸ್ಥೆ ಇದೀಗ ಉಚಿತವಾಗಿ ಮೂರು ತಿಂಗಳ ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆ ನೀಡಲು ಮುಂದಾಗಿದೆ. ಪ್ರಸ್ತುತ ಯೂ ಟ್ಯೂಬ್ ಪ್ರೀಮಿಯಂ ಬಳಕೆ ಮಾಡದ ಗ್ರಾಹಕರಿಗೆ ಈ ಆಫರ್ ಅನ್ವಯವಾಗಲಿದೆ.
ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಸಹಾಯದಿಂದ ಈ ಚಂದಾದಾರಿಕೆ ಪಡೆಯಬಹುದಾಗಿದೆ. ಅಂದಹಾಗೆ ಈ ಕೊಡುಗೆ ಏಪ್ರಿಲ್ 22, 2021ರವರೆಗೆ ಮಾನ್ಯವಾಗಿರಲಿದೆ.
ಆದರೆ ಈಗಾಗಲೇ ಇರುವ ಚಂದಾದಾರರು ಹಾಗೂ ಗೂಗಲ್ ಪ್ಲೇ ಮ್ಯೂಸಿಕ್ ಚಂದಾದಾರರಿಗೆ ಈ ಕೊಡುಗೆ ಸಿಗುವುದಿಲ್ಲ. ಆಯ್ದ ಏರ್ಟೆಲ್ ಗ್ರಾಹಕರಿಗೆ ಮಾತ್ರ ಈ ಸೇವೆ ಸಿಗಲಿದೆ.
ಉಚಿತ ಯೂಟ್ಯೂಬ್ ಚಂದಾದಾರಿಕೆ ಬಯಸುವ ಗ್ರಾಹಕರು ತಮ್ಮ ನೋಂದಾಯಿತ ಇ ಮೇಲ್ ಹಾಗೂ ಮೊಬೈಲ್ ಸಂಖ್ಯೆಯನ್ನ ನಮೂದಿಸಿ ಆರು ತಿಂಗಳವರೆಗೆ ಕಾಯಬೇಕು ಅಂತಾ ಕಂಪನಿ ಹೇಳಿದೆ.