ಭಾರತದ ಟೆಲಿಕಾಂ ಕಂಪನಿ ಏರ್ಟೆಲ್ ಶೀಘ್ರದಲ್ಲೇ ಅಗ್ಗದ 4 ಜಿ ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಜಿಯೋಗೆ ಸ್ಪರ್ಧೆ ನೀಡಲು ಏರ್ಟೆಲ್ ಮುಂದಾಗಿದೆ. ಜಿಯೋ ಕಡಿಮೆ ಬೆಲೆಯ 4 ಜಿ ಹ್ಯಾಂಡ್‌ಸೆಟ್‌ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿದ್ದು, ಇದಕ್ಕೆ ಟಕ್ಕರ್ ನೀಡಲು ಏರ್ಟೆಲ್ ಮುಂದಾಗಿದೆ.
ವರದಿಯ ಪ್ರಕಾರ, ಭಾರತಿ ಏರ್ಟೆಲ್ ಶೀಘ್ರದಲ್ಲೇ ಭಾರತದ ಸ್ಮಾರ್ಟ್‌ಫೋನ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ. ಅಗ್ಗದ 4ಜಿ ಫೋನ್ ಜೊತೆ ಡೇಟಾ ನೀಡಿ ಭಾರತೀಯ ಮಾರುಕಟ್ಟೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದು ಜಿಯೋ ಪ್ಲಾನ್ ಆಗಿದೆ. ಇದಕ್ಕೆ ಸ್ಪರ್ಧೆ ನೀಡಲು ಏರ್ಟೆಲ್, ಲಾಕ್ ಹಾಗೂ ಅನ್ಲಾಕ್ ಎರಡೂ ಸ್ಮಾರ್ಟ್ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಪ್ಲಾನ್ ನಲ್ಲಿದೆ. ಶೀಘ್ರದಲ್ಲಿಯೇ ಅಗ್ಗದ 4ಜಿ ಫೋನ್ ಬಿಡುಗಡೆ ಮಾಡುವ ಯೋಜನೆ ರೂಪಿಸಿದೆ.
ಜಿಯೋ ಈಗಾಗಲೇ ಎಂಟ್ರಿ ಲೆವೆಲ್ 4 ಜಿ ಸ್ಮಾರ್ಟ್‌ಫೋನ್‌ಗಳನ್ನು ಡೇಟಾ ಪ್ಲಾನ್ ಬಂಡಲ್‌ನೊಂದಿಗೆ ಮಾರಾಟ ಮಾಡಲಿದೆ. ಏರ್ಟೆಲ್ ಬಳಿ 2 ಜಿ ಮತ್ತು 3 ಜಿ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಆದರೆ ಜಿಯೋ ಗ್ರಾಹಕರ ಸಂಖ್ಯೆ ಕಡಿಮೆಯಿದೆ. ಜಿಯೋ ನೆಟ್‌ವರ್ಕ್ ಕೇವಲ 4 ಜಿ ಮಾತ್ರ ಬೆಂಬಲಿಸುತ್ತದೆ. 3 ಜಿ ಮತ್ತು 2 ಜಿ ಬಳಕೆದಾರರನ್ನು 4 ಜಿ ಕಡೆಗೆ ತರಬೇಕೆಂದು ಕಂಪನಿಯು ಬಯಸುತ್ತಿದೆ. ಇದಕ್ಕಾಗಿಯೇ ಜಿಯೋ ಎಂಟ್ರಿ ಲೆವೆಲ್ ಫೋನ್ ತರುವ ಆಲೋಚನೆಯಿಲ್ಲಿದೆ.