ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನಿಂದ ಸಂಕಷ್ಟದಲ್ಲಿರುವ ಗ್ರಾಹಕರಿಗೆ ಅನುಕೂಲವಾಗುವಂತೆ ಏರ್ಟೆಲ್ ಕಡಿಮೆ ಆದಾಯ ಹೊಂದಿದ ಬಳಕೆದಾರರಿಗೆ ಉಚಿತ ಪ್ರೀಪೇಯ್ಡ್ ಯೋಜನೆಯನ್ನು ಪ್ರಕಟಿಸಿದೆ.
ಕೊರೋನಾ ನಡುವೆ ಸಂಪರ್ಕದಲ್ಲಿರಲು ಕಡಿಮೆ ಆದಾಯ ಹೊಂದಿರುವ 5.5 ಕೋಟಿ ಗ್ರಾಹಕರಿಗೆ 49 ರೂ. ರಿಚಾರ್ಜ್ ಪ್ಯಾಕ್ ಅನ್ನು ಉಚಿತವಾಗಿ ನೀಡುವುದಾಗಿ ಭಾರತಿ ಏರ್ಟೆಲ್ ಪ್ರಕಟಿಸಿದೆ. ಏರ್ಟೆಲ್ ಬಳಕೆದಾರರಲ್ಲಿ 79 ರೂ. ರೀಚಾರ್ಜ್ ಕೂಪನ್ ಖರೀದಿಸುವ ಗ್ರಾಹಕರಿಗೆ ಈಗ ದುಪ್ಪಟ್ಟು ಪ್ರಯೋಜನ ಸಿಗಲಿದೆ ಎಂದು ಕಂಪನಿ ಹೇಳಿದೆ.
ಕಡಿಮೆ ಆದಾಯದ 5.5 ಕೋಟಿ ಗ್ರಾಹಕರಿಗೆ 49 ರೂ. ಪ್ಲಾನ್ ಉಚಿತವಾಗಿ ಸಿಗಲಿದೆ. ಈ ಯೋಜನೆಯು 270 ಕೋಟಿ ರೂ. ಮೌಲ್ಯದ್ದಾಗಿದೆ ಎಂದು ಭಾರತದ ಪ್ರಮುಖ ಟೆಲಿಕಾಂ ಕಂಪನಿಯಾಗಿರುವ ಏರ್ಟೆಲ್ ತಿಳಿಸಿದೆ.
ಒಂದು ಬಾರಿಯ ಗೆಸ್ಚರ್ ಆಗಿ, ಏರ್ಟೆಲ್ 55 ಮಿಲಿಯನ್ ಕಡಿಮೆ ಆದಾಯದ ಗ್ರಾಹಕರಿಗೆ 49 ರೂ. ಪ್ಯಾಕ್ ಅನ್ನು ಉಚಿತವಾಗಿ ನೀಡುತ್ತದೆ. ಈ ಪ್ಯಾಕ್ 28 ದಿನಗಳ ಮಾನ್ಯತೆಯೊಂದಿಗೆ 38 ರೂ. ಟಾಕ್ ಟೈಮ್ ಮತ್ತು 100 ಎಂಬಿ ಡೇಟಾ ನೀಡುತ್ತದೆ. ಈ ಮೂಲಕ ಗ್ರಾಮೀಣ ಪ್ರದೇಶಗಳ ಗ್ರಾಹಕರಿಗೆ ಸಂಪರ್ಕದಲ್ಲಿರಲು ಮತ್ತು ಅಗತ್ಯವಿದ್ದಾಗ ನಿರ್ಣಾಯಕ ಮಾಹಿತಿಯ ಹಂಚಿಕೊಳ್ಳಲು ಅನುಕೂಲವಾಗಲಿದೆ.
ಎರಡೂ ಪ್ರಯೋಜನಗಳು ಮುಂಬರುವ ವಾರದಲ್ಲಿ ಏರ್ಟೆಲ್ ಪ್ರಿಪೇಯ್ಡ್ ಗ್ರಾಹಕರಿಗೆ ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ.