
ಟೆಲಿಕಾಂ ಕಂಪನಿಗಳ ಮಧ್ಯೆ ಅಗ್ಗದ ಪ್ಲಾನ್ ಯುದ್ಧ ಮುಂದುವರೆದಿದೆ. ವರ್ಕ್ ಫ್ರಂ ಹೋಮ್ ಮಾಡ್ತಿರುವ ಜನರಿಗೆ ನೆರವಾಗಲೆಂದು ಅನೇಕ ಕಂಪನಿಗಳು ಅಗ್ಗದ ಪ್ಲಾನ್ ಬಿಡುಗಡೆ ಮಾಡಿವೆ. ರಿಲಾಯನ್ಸ್ ಜಿಯೋ, ವಿಐ ಪ್ರತಿ ದಿನ 4ಜಿಬಿ ಡೇಟಾ ನೀಡುವ ಪ್ಲಾನ್ ಬಗ್ಗೆ ಮಾಹಿತಿ ಇಲ್ಲಿದೆ.
ರಿಲಯನ್ಸ್ ಜಿಯೋ ಪ್ರತಿ ದಿನ 4 ಜಿಬಿ ನೀಡುವ ಎರಡು ಯೋಜನೆಗಳನ್ನು ನೀಡ್ತಿದೆ. ಮೊದಲ ಯೋಜನೆ 149 ರೂಪಾಯಿಯದ್ದು. ಈ ಯೋಜನೆಯಲ್ಲಿ ಅನಿಯಮಿತ ಧ್ವನಿ ಕರೆಗಳು, ಪ್ರತಿದಿನ 1 ಜಿಬಿ ಡೇಟಾ ಮತ್ತು 100 ಎಸ್‌ಎಂಎಸ್ ಸಿಗಲಿದೆ. ಈ ಯೋಜನೆಯ ಸಿಂಧುತ್ವ 24 ದಿನಗಳು.
ರಿಲಯನ್ಸ್ ಜಿಯೋ ಎರಡನೇ ಯೋಜನೆ ಬೆಲೆ 199 ರೂಪಾಯಿ. ಪ್ರತಿದಿನ 1.5 ಜಿಬಿ ಡೇಟಾ ಇದ್ರಲ್ಲಿ ಲಭ್ಯವಿದೆ. ಈ ಯೋಜನೆ ಸಿಂಧುತ್ವ 28 ದಿನಗಳು. ಬಳಕೆದಾರರಿಗೆ ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್ ಲಭ್ಯವಿರಲಿದೆ.
ಏರ್ಟೆಲ್ ನಲ್ಲಿ ಅಗ್ಗದ ಪ್ಲಾನ್ ಗಳಿವೆ. 19 ರೂಪಾಯಿ, 129 ರೂಪಾಯಿ, 179 ರೂಪಾಯಿ ಮತ್ತು 199 ರೂಪಾಯಿ ಯೋಜನೆಗಳಿವೆ. ಅಗ್ಗದ ಯೋಜನೆ 19 ರೂಪಾಯಿ. ಇದರಲ್ಲಿ 200 ಎಂಬಿ ಡೇಟಾವನ್ನು ಬಳಕೆದಾರರಿಗೆ 2 ದಿನಗಳವರೆಗೆ ನೀಡಲಾಗುತ್ತದೆ.
129 ರೂಪಾಯಿಗಳ ಯೋಜನೆಯಲ್ಲಿ 1 ಜಿಬಿ ಡೇಟಾವನ್ನು 24 ದಿನಗಳವರೆಗೆ ನೀಡಲಾಗುತ್ತದೆ. ಇದಲ್ಲದೆ ಅನಿಯಮಿತ ಕರೆ ಮತ್ತು 300 ಎಸ್‌ಎಂಎಸ್ ಸಹ ಇದರಲ್ಲಿ ನೀಡಲಾಗಿದೆ. 149 ರೂಪಾಯಿ ಯೋಜನೆಯಲ್ಲಿ 2 ಜಿಬಿ ಡೇಟಾವನ್ನು ಬಳಕೆದಾರರಿಗೆ 28 ದಿನಗಳವರೆಗೆ ನೀಡಲಾಗುತ್ತದೆ.
699 ರೂಪಾಯಿಗಳ ವೊಡಾಫೋನ್-ಐಡಿಯಾ ಯೋಜನೆ ಅತ್ಯುತ್ತಮವಾಗಿದೆ. ಈ ಯೋಜನೆಯ ಸಿಂಧುತ್ವವು 84 ದಿನಗಳು. ಯೋಜನೆಯಲ್ಲಿ ಪ್ರತಿದಿನ 4 ಜಿಬಿ ಡೇಟಾ ಲಭ್ಯವಿದೆ. ಈ ಯೋಜನೆಯಲ್ಲಿ ಒಟ್ಟು 336 ಜಿಬಿ ಡೇಟಾವನ್ನು ಬಳಕೆದಾರರಿಗೆ ನೀಡಲಾಗುತ್ತದೆ. ಯೋಜನೆಯಲ್ಲಿ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮಾಡಲು ಅವಕಾಶವಿದೆ.
84 ದಿನಗಳ ಮಾನ್ಯತೆಯೊಂದಿಗೆ ಪ್ರತಿದಿನ 3 ಜಿಬಿ ಡೇಟಾವನ್ನು ನೀಡುವ ರಿಲಯನ್ಸ್ ಜಿಯೋ ಯೋಜನೆ ಬೆಲೆ 999 ರೂಪಾಯಿ. ಈ ಯೋಜನೆಯಲ್ಲಿ ಒಟ್ಟು 252 ಜಿಬಿ ಡೇಟಾ ಲಭ್ಯವಿದೆ.