ಮಿನಿಮಮ್ ರಿಚಾರ್ಜ್ ಪ್ಲಾನ್ ಬೆಲೆ ಹೆಚ್ಚಳ ಮಾಡುವ ಮೂಲಕ ಭಾರ್ತಿ ಏರ್ಟೆಲ್ ರಾಜ್ಯದ ಜನತೆಗೆ ಶಾಕ್ ನೀಡಿದೆ. ಪ್ರತಿ ಗ್ರಾಹಕರಿಂದ ಸರಾಸರಿ ಆದಾಯ ಹೆಚ್ಚಳಕ್ಕಾಗಿ ಮಿನಿಮಮ್ ರೀಚಾರ್ಜ್ ಪ್ಲಾನ್ ಬೆಲೆಯನ್ನು ಮತ್ತೊಮ್ಮೆ ಹೆಚ್ಚಳ ಮಾಡಲಾಗಿದೆ.
ಬೆಲೆ ಏರಿಕೆ ಬದಲಾವಣೆಯನ್ನು ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ಜಾರಿಗೊಳಿಸಲಾಗಿದೆ. ಈ ಮೊದಲು ಹರಿಯಾಣ, ಒಡಿಶಾದಲ್ಲಿ ಬೆಲೆ ಹೆಚ್ಚಳ ಮಾಡಲಾಗಿತ್ತು. ಇನ್ನು ಮುಂದೆ ರಾಜ್ಯದಲ್ಲಿ ಏರ್ಟೆಲ್ ಬಳಕೆದಾರರು ಶೇಕಡ 57 ರಷ್ಟು ಹೆಚ್ಚಿನ ದರದಲ್ಲಿ ರೀಚಾರ್ಜ್ ಮಾಡಿಕೊಳ್ಳಬೇಕಿದೆ.
ಈ ಮೊದಲು ಏರ್ಟೆಲ್ ಗ್ರಾಹಕರು ಸಿಮ್ ಸಕ್ರಿಯವಾಗಿಟ್ಟುಕೊಳ್ಳಲು 99 ರೂಪಾಯಿ ಪ್ರಿಪೇಯ್ಡ್ ಪ್ಲಾನ್ ಲಭ್ಯವಿತ್ತು. ಇದನ್ನು 155 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. 99 ರೂಪಾಯಿ ಪ್ಲಾನ್ ನಲ್ಲಿ 28 ದಿನಗಳ ವರೆಗಿನ ವ್ಯಾಲಿಡಿಟಿಯಲ್ಲಿ 200 ಎಂಬಿ ಸೀಮಿತ ಡೇಟಾ ನೀಡಲಾಗುತ್ತಿತ್ತು. ಈ ಯೋಜನೆ ಇನ್ನು ಮುಂದೆ ಲಭ್ಯ ಇರುವುದಿಲ್ಲ. ಹೊಸ 155 ರೂಪಾಯಿ ಕನಿಷ್ಠ ರೀಚಾರ್ಜ್ ಪ್ಲಾನ್ 28 ದಿನಗಳವರೆಗೆ ಆನಿಯಮಿತ ಧ್ವನಿ ಕರೆ, ಒಂದು ಜಿಬಿ ಡೇಟಾ, 300 ಎಸ್ಎಂಎಸ್ ನೀಡಲಾಗುವುದು ಎಂದು ಹೇಳಲಾಗಿದೆ.