ನವದೆಹಲಿ: ಮೊಬೈಲ್ ಫೋನ್ ಬಳಕೆದಾರರಿಗೆ ಏರ್ಟೆಲ್ ಸಿಇಓ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಏರ್ಟೆಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋಪಾಲ್ ವಿಠ್ಠಲ್ ಅವರು ಗ್ರಾಹಕರಿಗೆ ಬರೆದ ಬಹಿರಂಗ ಪತ್ರದಲ್ಲಿ ಸೈಬರ್ ವಂಚನೆಗಳು ಬಾರಿ ಏರಿಕೆಯಾಗಿರುವ ಬಗ್ಗೆ ಮೊಬೈಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ವಂಚಕರು ಯಾವಾಗಲೂ ಲೋಪದೋಷಗಳನ್ನು ಗಮನಿಸುತ್ತಿದ್ದು ನಿಮ್ಮನ್ನು ಮೋಸಗೊಳಿಸಲು ಹೊಸಮಾರ್ಗ ಕಂಡುಕೊಳ್ಳುತ್ತಾರೆ ಎಂದು ಅವರು ತಿಳಿಸಿದ್ದಾರೆ. ಆನ್ಲೈನ್ ಪಾವತಿಗಳಂತಹ ಹೊಸ ಸೇವೆಗಳ ಮೂಲಕ ಕಂಪನಿಯ ಸುರಕ್ಷತೆ ಅನುಕೂಲತೆ ಭದ್ರತೆಯ ಬಗ್ಗೆ ಖಾತರಿ ನೀಡಿದ ಅವರು ಆನ್ಲೈನ್ ಪ್ಲಾಟ್ಫಾರ್ಮ್ ಮೂಲಕ ಮನೆಯಿಂದಲೇ ಸುರಕ್ಷಿತವಾಗಿ ಪಾವತಿ ಮಾಡಬಹುದು.
ಗ್ರಾಹಕರಿಗೆ ಅನುಕೂಲವಾಗಿರುವ ಪ್ರತಿ ವಹಿವಾಟಿಗೆ ಸುರಕ್ಷತೆ ನೀಡಲಾಗಿದೆ. ಮನೆಬಾಗಿಲಿಗೆ ಸಿಮ್ ಕಾರ್ಡ್ ತಲುಪಿಸುವ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಸುರಕ್ಷಿತ ವೇತನ ಉದ್ಯಮ ವೈಶಿಷ್ಟವನ್ನು ಆರಂಭಿಸಲಾಗಿದೆ ಎಂದು ಹೇಳಲಾಗಿದೆ.