![AirPods Pro Earbuds With Sound Issues to Be Replaced by Apple for Free | Technology News](https://i.gadgets360cdn.com/large/airpods_pro_design_1573626067246.jpg?downsize=950:*&output-quality=80)
ಆಪಲ್ ಕಂಪನಿಯ ಏರ್ ಪಾಡ್ಸ್ ಗಳಲ್ಲಿ ದೋಷ ಕಂಡು ಬರ್ತಿರುವ ಹಿನ್ನೆಲೆ ಆಪಲ್ ಸಂಸ್ಥೆ ಗ್ರಾಹಕರ ಏರ್ ಪಾಡ್ಸ್ ಗಳನ್ನ ಬದಲಾಯಿಸಿ ಕೊಡುತ್ತಿದೆ. ಏರ್ಪೋಡ್ಗಳಲ್ಲಿನ ಸಣ್ಣ ತಾಂತ್ರಿಕ ದೋಷದಿಂದಾಗಿ ಸೌಂಡ್ ಸಿಸ್ಟಮ್ನಲ್ಲಿ ಸಮಸ್ಯೆ ಉಂಟಾಗಿದೆ ಅಂತಾ ಆಪಲ್ ಸಂಸ್ಥೆ ಮಾಹಿತಿ ನೀಡಿದೆ.
ಏರ್ ಪಾಡ್ಸ್ ಪ್ರೋ ಇಯರ್ಬಡ್ಗಳನ್ನ ಖರೀದಿ ಮಾಡಿದ್ದ ಗ್ರಾಹಕರು ಇದರಲ್ಲಿ ಶಬ್ದ ಸಮಸ್ಯೆಯನ್ನ ಅನುಭವಿಸಿದ್ದರು, ಹೀಗಾಗಿ ಈ ಸಮಸ್ಯೆಯನ್ನ ಎದುರಿಸುತ್ತಿರುವ ಎಲ್ಲ ಗ್ರಾಹಕರಿಗೆ ಉಚಿತವಾಗಿ ಏರ್ ಬಡ್ಗಳನ್ನ ಬದಲಾಯಿಸಿಕೊಡಲಾಗುವುದು ಅಂತಾ ಸಂಸ್ಥೆ ಹೇಳಿದೆ.
ಫೋನ್ನಲ್ಲಿ ಮಾತನಾಡುತ್ತಿರುವಾಗ ಅಥವಾ ಹೊರಗಡೆ ಇದ್ದಾಗ ಈ ಏರ್ ಪಾಡ್ಸ್ ಗಳಲ್ಲಿ ಧ್ವನಿ ವಿಚಿತ್ರವಾಗಿ ಕೇಳುತ್ತಿತ್ತು. ಮುಖ್ಯವಾದ ಧ್ವನಿಗಿಂತ ಹಿನ್ನೆಲೆ ಧ್ವನಿ ಹೆಚ್ಚಾಗಿ ಕೇಳುತ್ತಿತ್ತು. ಇದೀಗ ಈ ಎಲ್ಲ ಗ್ರಾಹಕರ ಸಮಸ್ಯೆಗೆ ಪ್ರತಿಕ್ರಿಯಿಸಿರೋ ಆಪಲ್ ಸಂಸ್ಥೆ 2020 ಅಕ್ಟೋಬರ್ ಒಳಗಿನ ಏರ್ ಪಾಡ್ಸ್ ಖರೀದಿರಾರರಿಗೆ ಈ ಭರ್ಜರಿ ಆಫರ್ ನೀಡಿದೆ.