alex Certify BREAKING NEWS: ಸಂಪೂರ್ಣವಾಗಿ ಟಾಟಾ ಕಂಪನಿ ಪಾಲಾದ ಏರ್ ಏಷ್ಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಸಂಪೂರ್ಣವಾಗಿ ಟಾಟಾ ಕಂಪನಿ ಪಾಲಾದ ಏರ್ ಏಷ್ಯಾ

AirAsia India ಈಗ ಶೇ. 100 ರಷ್ಟು ಟಾಟಾದ ಏರ್ ಇಂಡಿಯಾದ ಒಡೆತನದಲ್ಲಿದೆ. ಮಲೇಷ್ಯಾ ಮೂಲದ AirAsia Aviation Group Ltd(AAGL), Capital A ಯ ಏರ್‌ ಲೈನ್ ಗ್ರೂಪ್‌ ನ ಹಿಡುವಳಿ ಕಂಪನಿ, AirAsia India Pvt Ltd(AAIPL) ನಲ್ಲಿ ಉಳಿದಿರುವ ಸಂಪೂರ್ಣ ಪಾಲನ್ನು ಟಾಟಾ ಸನ್ಸ್‌ನ ಏರ್ ಇಂಡಿಯಾ ಲಿಮಿಟೆಡ್‌ ಗೆ ಮಾರಾಟ ಮಾಡಿದೆ.

ಇದರೊಂದಿಗೆ ಟಾಟಾದ ಏರ್ ಇಂಡಿಯಾ ಈಗ ಮಾಲೀಕತ್ವವನ್ನು ಹೊಂದಿದೆ. AirAsia ಭಾರತದಲ್ಲಿ 100% ಪಾಲನ್ನು ಹೊಂದಿದೆ. ತನ್ನ ವಾಯುಯಾನ ವ್ಯವಹಾರಗಳನ್ನು ಒಂದೇ ಛತ್ರಿಯಡಿಯಲ್ಲಿ ಕ್ರೋಢೀಕರಿಸುವ ಟಾಟಾ ಸಮೂಹದ ಕಾರ್ಯತಂತ್ರದ ಭಾಗವಾಗಿ ಈ ಕ್ರಮ ಕೈಗೊಂಡಿದೆ.

AirAsia ಇಂಡಿಯಾ ಭಾರತದಲ್ಲಿ ಐದನೇ ಅತಿದೊಡ್ಡ ವಾಹಕವಾಗಿದೆ, ಒಟ್ಟು ಮಾರುಕಟ್ಟೆ ಪಾಲನ್ನು 5.7% ಹೊಂದಿದೆ. 2014 ರಲ್ಲಿ ದೇಶದಲ್ಲಿ ಅಂಗಸಂಸ್ಥೆಯನ್ನು ಸ್ಥಾಪಿಸಿದ ಮೊದಲ ವಿದೇಶಿ ವಿಮಾನಯಾನ ಸಂಸ್ಥೆಯಾಗಿದೆ.

ಏರ್‌ ಏಷಿಯಾ ಏವಿಯೇಷನ್ ​​ಏರ್‌ ಏಷ್ಯಾ ಇಂಡಿಯಾದಲ್ಲಿನ 16.33% ಪಾಲನ್ನು ಏರ್ ಇಂಡಿಯಾಗೆ ವಿಲೇವಾರಿ ಮಾಡಿದೆ. ಆದರೂ ಕಂಪನಿಗಳು ಷೇರು ಮಾರಾಟದ ನಿಖರವಾದ ಮೊತ್ತವನ್ನು ಬಹಿರಂಗಪಡಿಸಿಲ್ಲ. ಟಾಟಾದ ಏರ್ ಇಂಡಿಯಾ ಎಕ್ಸ್‌ ಪ್ರೆಸ್ ಮತ್ತು ಏರ್‌ ಏಷ್ಯಾ ಇಂಡಿಯಾ ಈಗ ಕಡಿಮೆ ವೆಚ್ಚದ ದೊಡ್ಡಮಟ್ಟದ ಏರ್‌ ಲೈನ್ ರೂಪಿಸುತ್ತವೆ, ಇದು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಇತರ ಬಜೆಟ್ ಕ್ಯಾರಿಯರ್‌ ಗಳಿಗೆ ತೀವ್ರ ಸ್ಪರ್ಧೆ ಒಡ್ಡುತ್ತದೆ.

AirAsia Berhad 2014 ರಲ್ಲಿ Tatas ಜೊತೆ ಒಪ್ಪಂದ ಮಾಡಿಕೊಂಡು ಜಂಟಿ ಉದ್ಯಮ ರಚಿಸಿತು. ಟಾಟಾ ಸಮೂಹ 51% ಪಾಲನ್ನು ಹೊಂದಿತ್ತು. ಸುಮಾರು ಎರಡು ವರ್ಷಗಳ ಹಿಂದೆ, ಟಾಟಾ ಗ್ರೂಪ್ ಕಾನೂನು ಸಮಸ್ಯೆಗಳ ನಡುವೆ ಏರ್ ಏಷ್ಯಾ ಇಂಡಿಯಾದಲ್ಲಿ ಹೆಚ್ಚುವರಿ 32.67% ಪಾಲನ್ನು ಖರೀದಿಸಿ 83.67% ಕ್ಕೆ ಹೆಚ್ಚಿಸಿತು. ಈಗ ಸಂಪೂರ್ಣವಾಗಿ ಷೇರುಗಳನ್ನು ಖರೀದಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...