ಇಂದಿನಿಂದ ಅಂತರಾಷ್ಟ್ರೀಯ ಹಾಗೂ ದೇಶಿ ವಿಮಾನದಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ದೇಶಿಯ ಹಾಗೂ ಅಂತರಾಷ್ಟ್ರೀಯ ವಿಮಾನಗಳ ಭದ್ರತಾ ಶುಲ್ಕವನ್ನು ಏಪ್ರಿಲ್ ಒಂದರಿಂದ ಹೆಚ್ಚಿಸಲಾಗಿದೆ. ದೇಶೀಯ ವಿಮಾನ ಪ್ರಯಾಣಿಕರಿಗೆ ಎಎಸ್‌ಎಫ್ 40 ರೂಪಾಯಿ ಹೆಚ್ಚಾಗಿದೆ. ಅಂತರರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಇದು 114.38 ರೂಪಾಯಿ ಹೆಚ್ಚಾಗಿದೆ.
ವಿಮಾನ ನಿಲ್ದಾಣಗಳ ಭದ್ರತಾ ವ್ಯವಸ್ಥೆಗಾಗಿ ದೇಶಿಯ ಹಾಗೂ ಅಂತರಾಷ್ಟ್ರೀಯ ವಿಮಾನ ಪ್ರಯಾಣಿಕರಿಂದ ಶುಲ್ಕ ಸಂಗ್ರಹಿಸಲಾಗುತ್ತದೆ. ಟಿಕೆಟ್ ದರದಲ್ಲಿಯೇ ಇದನ್ನು ಸೇರಿಸಲಾಗುತ್ತದೆ. ದೇಶೀಯ ಪ್ರಯಾಣಿಕರಿಂದ ವಿಮಾನಯಾನ ಭದ್ರತಾ ಶುಲ್ಕವಾಗಿ 200 ರೂಪಾಯಿ ವಸೂಲಿ ಮಾಡಲಾಗುತ್ತದೆ. ಅಂತರರಾಷ್ಟ್ರೀಯ ಪ್ರಯಾಣಿಕರಿಗೆ, ವಿಮಾನಯಾನ ಭದ್ರತಾ ಶುಲ್ಕವಾಗಿ 12 ಯುಎಸ್ ಡಾಲರ್ ವಿಧಿಸಲಾಗುತ್ತದೆ.
ಕೆಲವು ಪ್ರಯಾಣಿಕರಿಗೆ ಎಎಸ್ಎಫ್ ಪಾವತಿಯಿಂದ ವಿನಾಯಿತಿ ಸಿಕ್ಕಿದೆ. ಎರಡು ವರ್ಷದೊಳಗಿನ ಮಕ್ಕಳು, ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವವರು, ವಿಮಾನಯಾನ ಸಿಬ್ಬಂದಿ ಇದ್ರಲ್ಲಿ ಸೇರಿದ್ದಾರೆ. 2020ರಲ್ಲಿ ಶುಲ್ಕವನ್ನು ದೇಶೀಯ ಪ್ರಯಾಣಿಕರಿಗೆ 10 ರೂಪಾಯಿ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ 0.35 ಡಾಲರ್ ಹೆಚ್ಚಿಸಲಾಗಿತ್ತು. ಸಾಮಾನ್ಯ ಅಂತರರಾಷ್ಟ್ರೀಯ ವಿಮಾನ ಪ್ರಯಾಣ ಇನ್ನೂ ಪ್ರಾರಂಭವಾಗಿಲ್ಲ. ದೇಶಿಯ ವಿಮಾನಗಳ ಹಾರಾಟ ಶುರುವಾಗಿದೆ.