ಬೆಂಗಳೂರು: ಕೊರೋನಾ ಕಾರಣದಿಂದ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ಉದ್ದೇಶದೊಂದಿಗೆ ಇಂಡಿಯನ್ ಬ್ಯಾಂಕ್ ಬಡ್ಡಿ ದರ ಇಳಿಕೆ ಮಾಡಿದೆ.
ಕೃಷಿ ಚಟುವಟಿಕೆ ಸಂಬಂಧಿತ ಚಿನ್ನದ ಸಾಲದ ಮೇಲಿನ ಬಡ್ಡಿ ದರವನ್ನು ಜುಲೈ 22 ರಿಂದ ಕಡಿಮೆ ಮಾಡಲಾಗಿದೆ. ಕೃಷಿ ಚಟುವಟಿಕೆ ಕೈಗೊಳ್ಳುವ ಉದ್ದೇಶದೊಂದಿಗೆ ಚಿನ್ನಾಭರಣ ಮೇಲೆ ಸಾಲವನ್ನು ಶೇಕಡ 7 ರ ಬಡ್ಡಿ ದರದಲ್ಲಿ ನೀಡಲಾಗುವುದು. ಪ್ರತಿ 100 ರೂಪಾಯಿಗೆ 58 ಪೈಸೆಯಷ್ಟು ಬಡ್ಡಿ ಆಗುತ್ತದೆ. ಬೇರೆ ಬ್ಯಾಂಕುಗಳಿಗೆ ಹೋಲಿಸಿದರೆ ಇಂಡಿಯನ್ ಬ್ಯಾಂಕ್ ಕಡಿಮೆ ಬಡ್ಡಿ ದರದ ಸಾಲ ನೀಡಲಿದೆ ಎಂದು ಹೇಳಲಾಗಿದೆ.
ಚಿನ್ನದ ಶೇಕಡ 80 ರಷ್ಟು ಮಾರುಕಟ್ಟೆ ಮೌಲ್ಯದ ಮೇಲೆ ಸಾಲ ನೀಡಲಾಗುವುದು. ಕೃಷಿ ಚಟುವಟಿಕೆ ಸಂಬಂಧಿತ ಚಿನ್ನ ಸಾಲದ ಯೋಜನೆಯಡಿ ಕೃಷಿ, ವ್ಯವಸಾಯ ಚಟುವಟಿಕೆ, ಪಶುಸಂಗೋಪನೆ, ಮೀನುಗಾರಿಕೆ ಮೊದಲಾದವುಗಳಿಗೆ ಸಾಲ ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.