ಬಹಳಷ್ಟು ಬಾರಿ ಆಪಲ್ ಕಂಪನಿಯ ಉತ್ಪನ್ನಗಳ ಅನುಕರಣೆ ಮಾಡುವ ಮೂಲಕ ಸುದ್ದಿ ಮಾಡುವ ಚೀನಾದ ಶಿಯೋಮಿ ತನ್ನ ಫ್ಲಾಗ್‌ಶಿಪ್‌ನಲ್ಲಿ ಎಂಐ 11 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.
ಇದೇ ವಿಚಾರಕ್ಕೆ ಶಿಯೋಮಿ ಸಾಕಷ್ಟು ನಗೆಪಾಟಲಿಗೆ ಈಡಾದ ಅನೇಕ ನಿದರ್ಶನಗಳು ಇವೆ. ತನ್ನ ಐಫೋನ್ನ 12ರ ಬಾಕ್ಸ್‌ನಲ್ಲಿ ಚಾರ್ಜರ್ ಕೊಡದೇ ಇರುವ ಆಪಲ್ ಅನ್ನು ನೋಡಿರುವ ಶಿಯೋಮಿ ಈ ಬಗ್ಗೆ ಭಾರೀ ಅಣಕ ಮಾಡಿತ್ತು. ಜೊತೆಯಲ್ಲಿ ಸ್ಯಾಮ್ಸಂಗ್ ಸಹ ಆಪಲ್ ಅನ್ನು ಗೇಲಿ ಮಾಡಿತ್ತು.
ತನ್ನ ಕಾರ್ಬನ್ ಫುಟ್‌ಪ್ರಿಂಟ್ ತಗ್ಗಿಸಲು ಆಪಲ್ ಹೀಗೆ ಮಾಡಿದ್ದಾಗಿ ಹೇಳಿಕೊಂಡಿತ್ತು.
ಇದೀಗ ಎಂಐ 11 ಫೋನ್‌ನ ಬಾಕ್ಸ್‌ನಲ್ಲೂ ಸಹ ಚಾರ್ಜರ್ ಇರುವುದಿಲ್ಲ ಎಂದು ಶಿಯೋಮಿಯ ಸಿಇಓ ಲೀ ಜುನ್ ಸ್ಪಷ್ಟಪಡಿಸಿದ್ದಾರೆ. ತನ್ನ ಈ ನಿರ್ಧಾರಕ್ಕೆ ಪರಿಸರದ ಮೇಲಿನ ಕಾಳಜಿಯ ನೆಪ ಕೊಟ್ಟಿದೆ ಶಿಯೋಮಿ.
ತನ್ನ ಗ್ಯಾಲಾಕ್ಸಿ ಸೀರೀಸ್ ಫೋನುಗಳಲ್ಲಿ ಚಾರ್ಜರ್ ಕೊಟ್ಟೇ ಕೊಡುತ್ತೇವೆ ಎಂದು ಹೇಳಿಕೊಳ್ಳುತ್ತಲೇ ಬಂದಿರುವ ಸ್ಯಾಮ್ಸಂಗ್ ಯಾಕೋ ಇತ್ತೀಚೆಗೆ ಈ ವಿಚಾರದಲ್ಲಿ ಮೌನವಾಗಿಬಿಟ್ಟಿದೆ. ಹಾಗಾಗಿ, ಗ್ಯಾಲಾಕ್ಸಿಯ ಮುಂದಿನ ವರ್ಶನ್ ಫೋನ್ ಜೊತೆಗೆ ಚಾರ್ಜರ್ ಬರುವುದು ಅನುಮಾನ ಎಂಬಂತಾಗಿದೆ.
ಈ ಮೂರೂ ಕಂಪನಿಗಳ ಈ ಹೊಸ ’ಪೈಪೋಟಿ’ ನೆಟ್ಟಿಗರಿಗೆ ಟ್ರೋಲ್ ಮಾಡಲು ಒಳ್ಳೆಯ ಆಹಾರವಾಗಿಬಿಟ್ಟಿದೆ.
https://twitter.com/Xiaomi/status/1316299756260352006?ref_src=twsrc%5Etfw%7Ctwcamp%5Etweetembed%7Ctwterm%5E1316299756260352006%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fxiaomi-trolled-mi-11-apple-twitter-reactions-7123203%2F
https://twitter.com/SnazzyQ/status/1342950730118795265?ref_src=twsrc%5Etfw%7Ctwcamp%5Etweetembed%7Ctwterm%5E1342951662441271296%7Ctwgr%5E%7Ctwcon%5Es2_&ref_url=https%3A%2F%2Findianexpress.com%2Farticle%2Ftrending%2Ftrending-globally%2Fxiaomi-trolled-mi-11-apple-twitter-reactions-7123203%2F