alex Certify ಫೈಜರ್​, ಸೆರಮ್​ ಬಳಿಕ ತುರ್ತು ಅನುಮೋದನೆಗೆ ಅರ್ಜಿ ಸಲ್ಲಿಸಿದ ಮತ್ತೊಂದು ಲಸಿಕೆ ನಿರ್ಮಾಣ ಸಂಸ್ಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೈಜರ್​, ಸೆರಮ್​ ಬಳಿಕ ತುರ್ತು ಅನುಮೋದನೆಗೆ ಅರ್ಜಿ ಸಲ್ಲಿಸಿದ ಮತ್ತೊಂದು ಲಸಿಕೆ ನಿರ್ಮಾಣ ಸಂಸ್ಥೆ

ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್​ ಕಂಪನಿ ತಾನು ತಯಾರಿಸಿದ ಕೊರೊನಾ ವಿರುದ್ಧದ ಲಸಿಕೆ ಕೋವಾಕ್ಸಿನ್​ಗೆ ತುರ್ತು ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದೆ.

ಫೈಜರ್​, ಸೆರಮ್​ ಇನ್ಸ್​​ಟಿಟ್ಯೂಟ್​ ಆಫ್​ ಇಂಡಿಯಾ ಬಳಿಕ ಇದೀಗ ಭಾರತ್​ ಬಯೋಟೆಕ್‌ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿದ ಮೂರನೇ ಸಂಸ್ಥೆಯಾಗಿದೆ. ಇಂಡಿಯನ್​ ಕೌನ್ಸಿಲ್​ ಆಫ್​ ಮೆಡಿಕಲ್​ ರಿಸರ್ಚ್​ ಹಾಗೂ ಭಾರತ್​ ಬಯೋಟೆಕ್​​ಗಳೆರಡೂ ಜಂಟಿಯಾಗಿ ಈ ಲಸಿಕೆಯನ್ನ ಕಂಡುಹಿಡಿದಿತ್ತು.

ಸೆರಮ್​ ಹಾಗೂ ಭಾರತ್​ ಬಯೋಟೆಕ್​ಗಳೆರಡೂ ಪ್ರಸ್ತುತ ದೇಶದಲ್ಲಿ ತಮ್ಮ ಲಸಿಕೆಗಳ ಮೂರನೇ ಹಂತದ ಪ್ರಯೋಗವನ್ನ ನಡೆಸುತ್ತಿವೆ. ಕೊರೊನಾ ಲಸಿಕೆಗೆ ಅನುಮತಿ ಸಿಗಬೇಕು ಅಂದರೆ ಅದು ಶೇಕಡಾ
60ರಷ್ಟು ಪರಿಣಾಮಕಾರಿಯಾಗಿರೋದು ಅಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಆದರೆ ಕೋವ್ಯಾಕ್ಸಿನ್​ 60 ಪ್ರತಿಶತಕ್ಕಿಂತಲೂ ಜಾಸ್ತಿ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿದೆ ಅಂತಾ ಭಾರತ್ ಬಯೋಟೆಕ್​ ಹೇಳಿದೆ. ಆದರೆ ಕೋವ್ಯಾಕ್ಸಿನ್​ ಪ್ರಯೋಗದ ವೇಳೆ ಸ್ವಯಂ ಸೇವಕರಾಗಿ ಭಾಗಿಯಾಗಿ ಲಸಿಕೆ ಸೇವಿಸಿದ್ದ ಹರಿಯಾಣ ಆರೋಗ್ಯ ಸಚಿವ ಅನಿಲ್​ ವಿಜ್​​ ಅವರು ಲಸಿಕೆ ಸೇವಿಸಿದ ಬಳಿಕ ಸೋಂಕಿಗೆ ಒಳಪಟ್ಟಿದ್ದರಿಂದ ಬಯೋಟೆಕ್​ ಲಸಿಕೆ ವಿವಾದಕ್ಕೆ ಸಿಲುಕಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...