ಕೊರೊನಾ ವೈರಸ್ ನಿಂದಾಗಿ ಅನೇಕ ಉದ್ಯೋಗ ಅಳಿವಿನಂಚಿನಲ್ಲಿದೆ. ಜನರ ವೇತನ ಕಡಿತವಾಗುತ್ತಿದೆ. ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನ್ಲಾಕ್ 1.0 ಜಾರಿಯಲ್ಲಿರುವ ವೇಳೆ ಮತ್ತೆ ಉದ್ಯೋಗಗಳ ನೇಮಕಾತಿ ಶುರುವಾಗಿದೆ. ಕೊರೊನಾಗಿಂತ ಮೊದಲಿದ್ದ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಆದ್ರೆ ಇದ್ದಿದ್ದರಲ್ಲಿಯೇ ಸ್ವಲ್ಪ ಉತ್ತಮ ಬೆಳವಣಿಗೆ ಕಾಣಿಸುತ್ತಿದೆ.
ಈ ಸಮಯದಲ್ಲಿ ವೈಟ್ ಕಾಲರ್ ಉದ್ಯೋಗಕ್ಕೆ ಹೆಚ್ಚು ಬೇಡಿಕೆ ಬಂದಿದೆ. ಇದಕ್ಕೆ ಹೆಚ್ಚು ನೇಮಕ ನಡೆಯುತ್ತಿದೆ. ಜೂನ್ ತಿಂಗಳಲ್ಲಿ ಅನ್ಲಾಕ್ 1.0 ಸಮಯದಲ್ಲಿ ಈ ಉದ್ಯೋಗಗಳ ನೇಮಕ ಹೆಚ್ಚಾಗಿ ಕಂಡು ಬಂದಿದೆ. ಕೊರೊನಾ ಹಿಂದಿನ ಸಮಯಕ್ಕೆ ಹೋಲಿಕೆ ಮಾಡಿದ್ರೆ ಈ ನೇಮಕಾತಿ ಶೇಕಡಾ 30-60 ರಷ್ಟು ಕಡಿಮೆ.
ಐಟಿ ಸಾಫ್ಟ್ವೇರ್ ಕಂಪನಿಗಳು, ಔಷಧೀಯ ಕಂಪನಿಗಳು, ಜೈವಿಕ ತಂತ್ರಜ್ಞಾನ, ವ್ಯವಹಾರ ಪ್ರಕ್ರಿಯೆ ಹೊರ ಗುತ್ತಿಗೆ, ಐಟಿ ಸೇವೆಗಳು, ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳು, ಬ್ಯಾಂಕಿಂಗ್, ಹಣಕಾಸು ಸೇವೆಗಳು, ವಿಮೆ ಮುಂತಾದ ಕ್ಷೇತ್ರಗಳನ್ನು ವೈಟ್ ಕಾಲರ್ ಉದ್ಯೋಗ ಎನ್ನಲಾಗುತ್ತದೆ. ಇದು ಹೆಚ್ಚು ಲಾಭದಾಯಕ ಉದ್ಯೋಗಗಳಾಗಿವೆ.