alex Certify ʼಕೊರೊನಾʼ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಬೋನಸ್ ನೀಡ್ತಿದೆ ಈ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಬೋನಸ್ ನೀಡ್ತಿದೆ ಈ ಕಂಪನಿ

ಕೊರೊನಾ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಮತ್ತೆ ಕೆಲ ಕಂಪನಿಗಳು ಉದ್ಯೋಗಿಗಳ ಸಂಬಳದಲ್ಲಿ ಕಡಿತ ಮಾಡಿವೆ. ಈ ಮಧ್ಯೆ ಅಕ್ಸೆಂಚರ್ ಕಂಪನಿ ತನ್ನ ಉದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ. ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ಬಂದ ಹಿನ್ನಲೆಯಲ್ಲಿ ಕಂಪನಿ ಬೋನಸ್ ನೀಡುವ ಘೋಷಣೆ ಮಾಡಿದೆ.

ಕೊರೊನಾ ವೈರಸ್ ಅವಧಿಯಲ್ಲಿ ನೌಕರರ ಕೆಲಸವನ್ನು ಗಮನದಲ್ಲಿಟ್ಟುಕೊಂಡು ಅಕ್ಸೆಂಚರ್ ಈ ಬೋನಸ್ ನೀಡಿದೆ. ಕಂಪನಿಯು ಎಲ್ಲಾ ಉದ್ಯೋಗಿಗಳಿಗೆ ಒಂದು ವಾರದ ಮೂಲ ವೇತನವನ್ನು ಬೋನಸ್ ರೂಪದಲ್ಲಿ ಘೋಷಿಸಿದೆ. ಭಾರತದಲ್ಲಿ ಕೆಲಸ ಮಾಡುವ ಕಂಪನಿಯ ಸುಮಾರು 2 ಲಕ್ಷ ಉದ್ಯೋಗಿಗಳಿಗೆ ಬೋನಸ್ ಸಿಗಲಿದೆ.

ಫೆಬ್ರವರಿ 28 ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಅಕ್ಸೆಂಚರ್‌ನ ಆದಾಯವು ಶೇಕಡಾ 8 ರಷ್ಟು ಏರಿಕೆಯಾಗಿ 12.09 ಶತಕೋಟಿ ಡಾಲರ್‌ಗೆ ತಲುಪಿದೆ. ಕಂಪನಿಯ ಒಟ್ಟು ಆದಾಯವು ಎರಡನೇ ತ್ರೈಮಾಸಿಕದಲ್ಲಿ 1.46 ಬಿಲಿಯನ್ ಆಗಿದ್ದು, ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಆದಾಯ 1.25 ಬಿಲಿಯನ್‌ ಆಗಿತ್ತು.

ಈ ಹಿಂದೆ ಅಕ್ಸೆಂಚರ್‌ನ ಸಲಹಾ ಸಂಸ್ಥೆ ಪಿಡಬ್ಲ್ಯುಸಿ ತನ್ನ ಎಲ್ಲ ಉದ್ಯೋಗಿಗಳಿಗೆ ಬೋನಸ್ ಘೋಷಿಸಿತ್ತು. ಪಿಡಬ್ಲ್ಯೂಸಿ ಬೋನಸ್ ನೌಕರರ ಎರಡು ವಾರಗಳ ವೇತನಕ್ಕೆ ಸಮನಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...