ನವದೆಹಲಿ: ಹೊಸ ವರ್ಷಕ್ಕೆ ಹೊಸ ವಾಹನ, ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ.
ಆಟೋಮೊಬೈಲ್, ಎಲೆಕ್ಟ್ರಾನಿಕ್ ಉತ್ಪಾದನಾ ಕಂಪನಿಗಳು ಮತ್ತೊಂದು ಸುತ್ತಿನ ದರ ಏರಿಕೆ ಮಾಡಲು ಸಜ್ಜಾಗಿವೆ. ವಾಷಿಂಗ್ ಮೆಷಿನ್, ರೆಫ್ರಿಜರೇಟರ್, ಏರ್ ಕಂಡಿಷನರ್ ದರ ಹೆಚ್ಚಳವಾಗಲಿದೆ. ಆಟೋಮೊಬೈಲ್ ಕಂಪನಿಗಳು ಕೂಡ ದರ ಹೆಚ್ಚಳ ಮಾಡಲು ಮುಂದಾಗಿವೆ. ಇದರ ಪರಿಣಾಮ ಕಾರ್ ಗಳು ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳ ದರ ಶೇಕಡ 4 ರಿಂದ ಶೇಕಡ 10 ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ಫಾಸ್ಟ್ ಮೂವಿಂಗ್ ಕನ್ ಸ್ಯೂಮರ್ ಗೂಡ್ಸ್ ಕಂಪನಿಗಳು ಹೊಸ ವರ್ಷದ ಮೊದಲ ಮೂರು ತಿಂಗಳಲ್ಲಿ ದರ ಏರಿಕೆಗೆ ಮುಂದಾಗಿವೆ. ಇತ್ತೀಚೆಗಷ್ಟೇ ಶೇಕಡ 3.6 ರಷ್ಟು ದರ ಹೆಚ್ಚಳವಾಗಿತ್ತು. ಮತ್ತೆ ಶೇಕಡ 6 ರಿಂದ 10 ರವರೆಗೆ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಸಾಗಣೆ ವೆಚ್ಚ, ಉತ್ಪಾದನಾ ವೆಚ್ಚ ಏರಿಕೆಯಾದ ಕಾರಣ ದರ ಹೆಚ್ಚಳ ಮಾಡಲು ಉತ್ಪಾದನಾ ಕಂಪನಿಗಳು ಮುಂದಾಗಿವೆ. ಇದರಿಂದಾಗಿ ಹೊಸ ವರ್ಷದಲ್ಲಿ ಹೊಸ ಕಾರ್, ಎಲೆಕ್ಟ್ರಾನಿಕ್ ವಸ್ತು ಖರೀದಿಸುವವರಿಗೆ ಹೊರೆಯಾಗಲಿದೆ ಎನ್ನಲಾಗಿದೆ.