ನವದೆಹಲಿ: ಕೊರೋನಾ ಸಾಂಕ್ರಾಮಿಕ ರೋಗ ತಡೆಗೆ ಲಾಕ್ ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ಕೆಲಸ ಕಳೆದುಕೊಂಡವರಿಗೆ ಮೂರು ತಿಂಗಳ ವೇತನ ಪರಿಹಾರ ನೀಡಲಾಗುತ್ತದೆ.
ಕೇಂದ್ರ ಸರ್ಕಾರ ಕಾರ್ಮಿಕ ಸಚಿವಾಲಯದ ಮೂಲಕ ಸಹಾಯ ಹಸ್ತ ಚಾಚಲು ಕ್ರಮಕೈಗೊಂಡಿದ್ದು, ಆಟಲ್ ಬಿಮಿಟ್ ವ್ಯಕ್ತಿ ಕಲ್ಯಾಣ್ ಯೋಜನೆಯಡಿ ಮೂರು ತಿಂಗಳ ವೇತನದ ಶೇಕಡ 50 ರಷ್ಟು ಮೊತ್ತವನ್ನು ಸರ್ಕಾರ ಭರಿಸುತ್ತದೆ.
ಆಗ ಕಲೆಸ ಕಳೆದುಕೊಂಡು ಈಗಾಗಲೇ ಕೆಲಸಕ್ಕೆ ಸೇರಿದವರಿಗೆ ಕೂಡ ಪರಿಹಾರ ಕೊಡಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರ 44 ಸಾವಿರ ಕೋಟಿ ರೂಪಾಯಿ ಅನುದಾನ ಕಾಯ್ದಿರಿಸಿದೆ. ಪಿಎಫ್ ಮತ್ತು ಇಎಸ್ಐ ಸೌಲಭ್ಯ ಹೊಂದಿದ ಉದ್ಯೋಗಿಗಳು ಲಾಕ್ಡೌನ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡಿದ್ದರೆ ಅವರಿಗೆ ಯೋಜನೆಯಡಿ ಆದ್ಯತೆ ಸಿಗುತ್ತದೆ ಎಂದು ಕಾರ್ಮಿಕ ಸಚಿವಾಲಯ ಮಾಹಿತಿ ನೀಡಿದೆ.
ಹೆಚ್ಚಿನ ಮಾಹಿತಿಗಾಗಿ https://www.esic.nic.in/ ವೆಬ್ ಸೈಟ್ ಗಮನಿಸಬಹುದಾಗಿದೆ. ಅರ್ಜಿಸಲ್ಲಿಸಲು ಡಿಸೆಂಬರ್ 31ರವರೆಗೆ ಅವಕಾಶವಿದೆ ಎಂದು ಹೇಳಲಾಗಿದೆ.