ನವದೆಹಲಿ: ನಿವೇಶನ ಮಾರಾಟಕ್ಕೂ ಜಿಎಸ್ಟಿ ಅನ್ವಯವಾಗಲಿದೆ ಎಂದು ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ ತಿಳಿಸಿದೆ.
ಚರಂಡಿ ವ್ಯವಸ್ಥೆ, ವಿದ್ಯುತ್, ನೀರು ಮೊದಲಾದ ಮೂಲಸೌಕರ್ಯವನ್ನು ಹೊಂದಿರುವ ನಿವೇಶನಗಳ ಮಾರಾಟಕ್ಕೆ ಸರಕು ಮತ್ತು ಸೇವಾ ತೆರಿಗೆ ಅನ್ವಯವಾಗಲಿದೆ ಎಂದು ಎಎಆರ್ ತಿಳಿಸಿದೆ.
ಅಭಿವೃದ್ಧಿಪಡಿಸಲಾದ ನಿವೇಶನ ಫ್ಲಾಟ್ಗಳ ಮಾರಾಟ ಮಾಡುವ ಉದ್ದೇಶದಿಂದ ನಿರ್ಮಿಸಲಾದ ಕಾಂಪ್ಲೆಕ್ಸ್ ಗಳ ವ್ಯಾಪ್ತಿಗೆ ಬರಲಿದ್ದು ಇದಕ್ಕೆ ಸರಕು ಮತ್ತು ಸೇವಾ ತೆರಿಗೆ ಅನ್ವಯವಾಗಲಿದೆ ಎಂದು ಹೇಳಲಾಗಿದೆ.
ಪ್ಲಾಟ್ ನಿರ್ಮಾಣದ ಸಂದರ್ಭದಲ್ಲಿ ಜಿಎಸ್ಟಿ ಪಾವತಿಸುವ ಕುರಿತಾಗಿ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ಗುಜರಾತ್ ನ್ಯಾಯಪೀಠ ಈ ಆದೇಶ ನೀಡಿದೆ. ಈ ಆದೇಶ ಜಿಎಸ್ಟಿ ಮೂಲರಚನೆಗೆ ವಿರುದ್ಧವಾಗಿದ್ದು, ರಿಯಲ್ ಎಸ್ಟೇಟ್ ವಲಯದ ಮೇಲೆ ದುಷ್ಪರಿಣಾಮ ಬೀರಲಿದೆ ಎನ್ನುವ ಅಭಿಪ್ರಾಯ ಕೇಳಿಬಂದಿದೆ.