ಆಧಾರ್ ಕಾರ್ಡ್ ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ. ಸರ್ಕಾರಿ ಕೆಲಸ ಸೇರಿದಂತೆ ಖಾಸಗಿಯ ಕೆಲ ಕೆಲಸಗಳಿಗೆ ಆಧಾರ್ ಅನಿವಾರ್ಯವಾಗಿದೆ. ಆಧಾರ್ ಕಾರ್ಡ್ ಪಡೆದರೆ ಸಾಲದು. ಮೊಬೈಲ್ ಸಂಖ್ಯೆ ಬದಲಾದಲ್ಲಿ ಅಥವಾ ಮನೆ ವಿಳಾಸ ಬದಲಾದಲ್ಲಿ ಅದನ್ನು ನವೀಕರಿಸಬೇಕಾಗುತ್ತದೆ. ಹೊಸ ಮನೆಗೆ ಶಿಫ್ಟ್ ಆಗಿದ್ದು, ಆಧಾರ್ ನಲ್ಲಿ ಮನೆ ವಿಳಾಸ ಬದಲಿಸಲು ಬಯಸಿದ್ದರೆ ಚಿಂತಿಸುವ ಅಗತ್ಯವಿಲ್ಲ. ಇನ್ಮುಂದೆ ಈ ಕೆಲಸ ಸುಲಭವಾಗಲಿದೆ.
ಸಾಮಾನ್ಯವಾಗಿ ಆಧಾರ್ ಕಾರ್ಡ್ ನಲ್ಲಿ ಮನೆ ವಿಳಾಸ ಬದಲಿಸಲು ವಸತಿ ಪುರಾವೆ ಹೊಂದಿರಬೇಕು. ನಿಮ್ಮಲ್ಲಿ ಯಾವುದೇ ಪುರಾವೆಗಳಿಲ್ಲದಿದ್ದರೆ, ಆಧಾರ್ ಕಾರ್ಡ್ ಪರಿಶೀಲಕ ( ಆಧಾರ್ ವೆರಿಫೈಯರ್) ಸಹಾಯದಿಂದ ಆಧಾರ್ ಕಾರ್ಡ್‌ನಲ್ಲಿರುವ ವಿಳಾಸವನ್ನು ನವೀಕರಿಸಬಹುದು.
ಆಧಾರ್ ಕಾರ್ಡ್ ಪರಿಶೀಲಕ ಎಂದರೆ ಕುಟುಂಬದ ಯಾವುದೇ ಸದಸ್ಯ, ಸ್ನೇಹಿತ ಅಥವಾ ಮನೆ ಮಾಲೀಕರು ಬರುತ್ತಾರೆ. ಇವರು ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನೀಡಿರುವ ವಿಳಾಸವನ್ನು ಪುರಾವೆಯಾಗಿ ಬಳಸಲು ನಿಮಗೆ ಅನುಮತಿಸಬೇಕಾಗುತ್ತದೆ. ಇದಕ್ಕಾಗಿ ಮೊದಲು ನೀವು ವಿಳಾಸ ಮೌಲ್ಯ ಮಾಪನ ಪತ್ರಕ್ಕಾಗಿ ಅರ್ಜಿ ಸಲ್ಲಿಸಬೇಕು. ಯುಐಡಿಎಐ ಅಧಿಕೃತ ವೆಬ್ಸೈಟ್ ಗೆ ಹೋಗಿ ಇದನ್ನು ಡೌನ್ಲೋಡ್ ಮಾಡಬೇಕಾಗುತ್ತದೆ. ಆನ್ಲೈನ್ ನಲ್ಲಿ ಮಾಡುವುದಾದ್ರೆ ಎಸ್ ಎಸ್ಯುಪಿ ಪರದೆ ತೆರೆಯಬೇಕು. ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಕಬೇಕು. ನಂತ್ರ ವೆರಿಫೈಯರ್ ಮಾಡುವ ವ್ಯಕ್ತಿಯ ಆಧಾರ್ ಸಂಖ್ಯೆ ಹಾಕಬೇಕು. ನಂತ್ರ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ನಿಮಗೆ ಹಾಗೂ ವೆರಿಫೈಯರ್ ಗೆ ಬಂದ ಒಟಿಪಿ ಹಾಕಿ ಪರಿಶೀಲಿಸಿ ಬಟನ್ ಕ್ಲಿಕ್ ಮಾಡಬೇಕು. ಪರಿಶೀಲನೆ ನಂತ್ರ ಎಸ್ ಎಂಎಸ್ ಮೂಲಕ ನಿಮಗೆ ಸಂದೇಶ ಬರಲಿದೆ. ಅದ್ರಲ್ಲಿರುವ ಸರ್ವಿಸ್ ರಿಕ್ವೆಸ್ಟ್ ನಂಬರ್ ಮೂಲಕ ನೀಡಲಾಗುತ್ತದೆ. ಅದನ್ನು ಬಳಸಿಕೊಂಡು ಆಧಾರ್ ವಿಳಾಸ ಅಪ್ಡೇಟ್ ಮಾಡಬೇಕು.