
ಆಧಾರ್ ಕಾರ್ಡ್ ಹೊಂದಿದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಪಿವಿಸಿ ಆಧಾರ್ ಕಾರ್ಡ್ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ.
ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ವತಿಯಿಂದ ಪಿವಿಸಿ ಆಧಾರ್ ಕಾರ್ಡ್ ಪರಿಚಯಿಸಲಾಗಿದೆ. ಎಟಿಎಂ ಕಾರ್ಡ್ ಮಾದರಿಯ ಆಧಾರ್ ಕಾರ್ಡ್ ಗಳನ್ನು ನೀಡಲಿದ್ದು ಇದನ್ನು ಸುಲಭವಾಗಿ ಕೊಂಡೊಯ್ಯಬಹುದಾಗಿದೆ.
ಪಿವಿಸಿ ಆಧಾರ್ ಕಾರ್ಡ್ ಪಡೆಯಲು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ https://resident.uidai.gov.in ನಲ್ಲಿ ಆನ್ಲೈನ್ ಪೋರ್ಟಲ್ ಅರ್ಜಿ ಸಲ್ಲಿಸಬಹುದು. ಮೈ ಆಧಾರ್ ಕಾರ್ಡ್ ಕ್ಲಿಕ್ ಮಾಡಿ ಬಳಿಕ ಆಧಾರ್ ಪಿವಿಸಿ ಕಾರ್ಡ್ ಕ್ಲಿಕ್ ಮಾಡಿ ಮಾಹಿತಿ ನೀಡಿದಲ್ಲಿ ಒಟಿಪಿ ಬರುತ್ತದೆ. ಅದನ್ನು ನಮೂದಿಸಿದ ನಂತರ ಹಣ ಪಾವತಿ ಮಾಡಲಾಗುವುದು ಎಂದು ಹೇಳಲಾಗಿದೆ.