ನವದೆಹಲಿ: ಪಿಂಚಣಿದಾರರಿಗೆ ಲೈಫ್ ಸರ್ಟಿಫಿಕೇಟ್ ಆಧಾರ್ ಕಡ್ಡಾಯವಲ್ಲ ಎಂದು ಸರ್ಕಾರ ತಿಳಿಸಿದೆ. ಪಿಂಚಣಿದಾರರು ನಿವೃತ್ತಿ ವೇತನ ಪಡೆದುಕೊಳ್ಳಲು ಡಿಜಿಟಲ್ ಜೀವಂತ ಪ್ರಮಾಣ ಪತ್ರ ಜೀವನ್ ಪ್ರಮಾಣ್ ಗೆ ಆಧಾರ್ ಕಡ್ಡಾಯವಲ್ಲ ಎಂದು ಹೇಳಲಾಗಿದೆ.
ಅಪ್ಲಿಕೇಶನ್ ಗೆ ಆಧಾರ್ ವೆರಿಫಿಕೇಶನ್ ಐಚ್ಛಿಕವಾಗಿದೆ. ಸರ್ಕಾರಿ ಕಚೇರಿಗಳ ಹಾಜರಾತಿ ನಿರ್ವಹಣೆಗೆ ಆಧಾರ ಕಡ್ಡಾಯವಲ್ಲವೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಧಾರ್ ಪ್ರಮಾಣೀಕರಣ ಸಮಾಜಕಲ್ಯಾಣ, ಆವಿಷ್ಕಾರ, ಜ್ಞಾನ ನಿಯಮಗಳು -2020 ರ ಅನ್ವಯ ಈ ಕ್ರಮಕೈಗೊಳ್ಳಲಾಗಿದ್ದು, ಸರ್ಕಾರಿ ಕಚೇರಿಗಳ ನಿರ್ವಹಣೆಗೆ ಕೂಡ ಆಧಾರ್ ಕಡ್ಡಾಯವಲ್ಲ, ಐಚ್ಛಿಕವಾಗಿದೆ ಎಂದು ಹೇಳಲಾಗಿದೆ.