ಯಾದಗಿರಿ: 2021-22ನೇ ಸಾಲಿನ ಡೇ-ನಲ್ಮ್ ಯೋಜನೆಯಡಿಯಲ್ಲಿ ವೈಯಕ್ತಿಕ ಬ್ಯಾಂಕ್ ಸಾಲ ಸೌಲಭ್ಯ, ಸ್ವಸಹಾಯ ಗುಂಪುಗಳಿಗೆ ಬ್ಯಾಂಕ್ ಸಾಲ ಸೌಲಭ್ಯ, ಸ್ವಸಹಾಯ ಗುಂಪುಗಳಿಗೆ ಬ್ಯಾಂಕ್ ಲಿಂಕೆಜ್ ಸಾಲ ಸೌಲಭ್ಯ ಮತ್ತು ಸ್ವಸಹಾಯ ಸಂಘಗಳ ರಚನೆ ವಿವಿಧ ಕಾರ್ಯಕ್ರಮಗಳ ಸೌಲಭ್ಯಗಳನ್ನು ಯಾದಗಿರಿ ನಗರಸಭೆ ವತಿಯಿಂದ ಕಲ್ಪಿಸಿಕೊಡಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಅರ್ಹರು ಮತ್ತು ಆಸ್ತಕಿ ಇರುವ ಅರ್ಜಿದಾರರು ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಕನಿಷ್ಟ ಮೂರು ವರ್ಷ ವಾಸವಾಗಿರಬೇಕು, ಬಡತನ ರೇಖೆಗಿಂತ ಕೆಳಗಿನವರಾಗಿರಬೇಕು, ಅರ್ಜಿದಾರರು ವಿವಿಧ ಕಾರ್ಯಾಕ್ತಮಗಳಿಗೆ ಪ್ರತ್ಯೇಕ ಅರ್ಜಿಗಳು ಸಲ್ಲಿಸಬೇಕು, ಅರ್ಜಿದಾರರು ಇತರೆ ದಾಖಲೆಗಳೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಚುನಾವಣೆ ಗುರುತಿನ ಪತ್ರ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಗತ್ತಿಸಬೇಕು ಇವೆಲ್ಲಾ ಷರತ್ತುಗಳಿಗೆ ಅರ್ಜಿದಾರರು ಬದ್ಧರಾಗಿ ಆಗಸ್ಟ್ 17 ರೊಳಗಾಗಿ ನಗರಸಭೆ ಕಾರ್ಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪೌರಾಯುಕ್ತ/ಸಮುದಾಯ ಸಂಘಟನಾಧಿಕಾರಿಗಳನ್ನು ಸಂಪರ್ಕಿಸಬಹುದು.