ನಿಮ್ಮ ಆಧಾರ್ ಕಾರ್ಡನ್ನು ಸುಲಭವಾಗಿ ಡಿಜಿ ಲಾಕರ್ ನಲ್ಲಿ ಸೇವ್ ಮಾಡಬಹುದು. ಅಷ್ಟೇ ಅಲ್ಲ ಡಿಜಿ ಲಾಕರ್ ನಲ್ಲಿರೋ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಪ್ರೊಫೈಲ್ ವಿವರ ಮತ್ತು ಮೊಬೈಲ್ ನಂಬರ್ ಅನ್ನು ಬದಲಾಯಿಸುವುದು ಕೂಡ ಸುಲಭ. ಇದಕ್ಕಾಗಿ ನಿಮ್ಮ ಹತ್ತಿರದ ಆಧಾರ್ ಎನ್ ರೋಲ್ಮೆಂಟ್ ಸೆಂಟರ್ ಗೆ ಭೇಟಿ ನೀಡಿ.
ಡಿಜಿ ಲಾಕರ್, ಕ್ಲೌಡ್ ಆಧಾರಿತ ಪ್ಲಾಟ್ ಫಾರ್ಮ್. ಇಲ್ಲಿ ಸ್ಟೋರೇಜ್, ಶೇರಿಂಗ್, ದಾಖಲೆಗಳ ಪರಿಶೀಲನೆ ಹಾಗೂ ನಿಮ್ಮ ಪ್ರಮಾಣಪತ್ರಗಳ ಎಲೆಕ್ಟ್ರಾನಿಕ್ ವರ್ಶನ್ ಪಡೆಯಲು ಸಹ ಅವಕಾಶವಿದೆ. ಆಧಾರ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ನಿಮ್ಮ ದಾಖಲೆಗಳನ್ನು ಆನ್ ಲೈನ್ ನಲ್ಲಿ ಸೇವ್ ಮಾಡಿಟ್ಟುಕೊಳ್ಳಲು ಸರ್ಕಾರ ಇದನ್ನು ಪರಿಚಯಿಸಿದೆ.
ಡಿಜಿ ಲಾಕರ್ ನಲ್ಲಿರೋ ನಿಮ್ಮ ಆಧಾರ್ ವಿವರಗಳನ್ನು ಆನ್ ಲೈನ್ ನಲ್ಲಿ ಬದಲಾಯಿಸಲು ಸಾಧ್ಯವಿಲ್ಲ. ಇದಕ್ಕಾಗಿ ಹತ್ತಿರದ ಮಳಿಗೆಗೆ ಭೇಟಿ ಕೊಡಿ. ಇನ್ನು ಡಿಜಿ ಲಾಕರ್ ಖಾತೆ ತೆರೆಯುವುದು ಬಹಳ ಸುಲಭ.
ಡಿಜಿ ಲಾಕರ್ ಡೌನ್ ಲೋಡ್ ಮಾಡಿಕೊಂಡ ಬಳಿಕ ಸೈನ್ ಇನ್ ಆಗಲು ಬಳಕೆದಾರರ ಮೊಬೈಲ್ ನಂಬರ್ ಅತ್ಯಗತ್ಯ. ಓಟಿಪಿ ಮೂಲಕ ಮೊಬೈಲ್ ನಂತರ ಅನ್ನು ದೃಢಪಡಿಸಿಕೊಳ್ಳಲಾಗುತ್ತದೆ. ಯೂಸರ್ ನೇಮ್ ಹಾಗೂ ಪಾಸ್ವರ್ಡ್ ಅನ್ನು ನೀವು ಆಯ್ಕೆ ಮಾಡಬೇಕು. ಡಿಜಿ ಲಾಕರ್ ಖಾತೆಯನ್ನು ಓಪನ್ ಮಾಡಿದ ಬಳಿಕ ಹೆಚ್ಚಿನ ಸೇವೆಯನ್ನು ಪಡೆದುಕೊಳ್ಳಲು ನಿಮ್ಮ ಆಧಾರ್ ಸಂಖ್ಯೆಯನ್ನು ಒದಗಿಸಿ.