alex Certify ಆಧಾರ್ ಕಾರ್ಡ್ ಹೊಂದಿದವರಿಗೆ ಹೊಸ ಸೌಲಭ್ಯ: ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಧಾರ್ ಕಾರ್ಡ್ ಹೊಂದಿದವರಿಗೆ ಹೊಸ ಸೌಲಭ್ಯ: ಇಲ್ಲಿದೆ ಮಾಹಿತಿ

ನವದೆಹಲಿ: ಬ್ಯಾಂಕ್ ಖಾತೆ ಸೇರಿ ಅನೇಕ ಸೇವೆ, ಸೌಲಭ್ಯ, ಯೋಜನೆಗಳಿಗೆ ಬಳಕೆಯಾಗುವ ಆಧಾರ್​ ಕಾರ್ಡ್​ನ್ನ ನಿಭಾಯಿಸುತ್ತಿರುವ ಯುಐಡಿಎಐ ಜನತೆಗೆ ಹೊಸ ಸೌಲಭ್ಯವೊಂದನ್ನ ನೀಡಿದೆ.

ಇದರ ಸಹಾಯದಿಂದ ದೇಶದ ಜನತೆಗೆ ತಮ್ಮ ನೋಂದಾಯಿತ ನಂಬರ್​ನ್ನ ತಾವೇ ಪರಿಶೀಲನೆ ಮಾಡಬಹುದಾಗಿದೆ. ಹಾಗೂ ಇನ್ನೊಬ್ಬ ವ್ಯಕ್ತಿಯ ಗುರುತನ್ನ ಪರಿಶೀಲನೆ ಮಾಡಲೂ ಕೂಡ ಈ ಸೌಲಭ್ಯವನ್ನ ಬಳಸಿಕೊಳ್ಳಬಹುದಾಗಿದೆ.

UIDAI ವೆಬ್​ಸೈಟ್(uidai.gov.in) ​ಗೆ ಭೇಟಿ ನೀಡಿ. ಅಲ್ಲಿರುವ ಸೇವೆಗಳ ವಿಭಾಗದಲ್ಲಿ ‘ಆಧಾರ್​ ಸಂಖ್ಯೆ ಪರಿಶೀಲಿಸಿ’ ಆಯ್ಕೆಯನ್ನ ಆಯ್ಕೆ ಮಾಡಿಕೊಳ್ಳಿ. ಇದಾದ ಬಳಿಕ ಪರಿಶೀಲನೆ ಮಾಡಬೇಕು ಎಂದುಕೊಂಡಿರುವ ಆಧಾರ್ ಸಂಖ್ಯೆಯನ್ನ ನಮೂದಿಸಿ. ಆಧಾರ್​ ವೆಬ್​ಸೈಟ್​ನಲ್ಲಿ ಕೇಳಲಾಗುವ ಲಿಂಗ, ವಯಸ್ಸು, ಹೆಸರು ಹಾಗೂ ನೋಂದಾಯಿತ ಮೊಬೈಲ್​ ಸಂಖ್ಯೆ ಹೀಗೆ ಕೇಳಿರುವ ಎಲ್ಲ ವಿವರಗಳನ್ನ ಒದಗಿಸಿ.

ಇದಾದ ನಂತರದಲ್ಲಿ ಆಧಾರ್ ನಂಬರ್ ಹೊಂದಿರುವ ವ್ಯಕ್ತಿಯ ಫೋಟೋ ನಿಮ್ಮ ಮೊಬೈಲ್​ ಸ್ಕ್ರೀನ್​​ನಲ್ಲಿ ಕಾಣುತ್ತೆ. ಅಲ್ಲದೇ mAadhaar ನಲ್ಲಿ “QR ಕೋಡ್ ಸ್ಕ್ಯಾನ್​’ನ್ನ ನೀಡಲಾಗುತ್ತೆ. ಇದನ್ನ ಸ್ಕ್ಯಾನ್​ ಮಾಡುವ ಮೂಲಕ ವ್ಯಕ್ತಿಯ ಗುರುತು ಸತ್ಯವೋ ಸುಳ್ಳೋ ಎಂಬುದನ್ನ ನೀವು ಪತ್ತೆ ಹಚ್ಚಬಹುದಾಗಿದೆ .

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...