ನವದೆಹಲಿ: ಅಗತ್ಯ ದಾಖಲೆಗಳಲ್ಲಿ ಒಂದಾಗಿರುವ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯಿಂದ ಹಿಡಿದು ಲಸಿಕೆಯವರೆಗೆ ಎಲ್ಲ ಕೆಲಸಗಳಿಗೂ ಅವಶ್ಯವಿದೆ.
ಕೆಲ ಆನ್ಲೈನ್ ದೃಢೀಕರಣಕ್ಕೆ ಆಧಾರ್ ಸಂಖ್ಯೆಯ ಅವಶ್ಯಕತೆಯಿರುತ್ತದೆ. ಇದನ್ನು ಇ-ಆಧಾರ್ ಮೂಲಕ ಸುಲಭವಾಗಿ ಮಾಡಬಹುದು. ಆಧಾರ್ ಸಂಖ್ಯೆ ಹಾಗೂ ದಾಖಲೆಗಳ ಮೂಲಕ ನಾವು ಈವರೆಗೆ ಇ-ಆಧಾರ್ ಡೌನ್ಲೋಡ್ ಮಾಡಬಹುದಿತ್ತು. ಯುಐಡಿಎಐ, ಆಧಾರ್ ಕಾರ್ಡ್ ಹೊಂದಿರುವವರಿಗೆ ಹೊಸ ವೈಶಿಷ್ಟ್ಯವನ್ನು ನೀಡ್ತಿದೆ. ಮುಖ ತೋರಿಸುವ ಮೂಲಕ ಇ-ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಇದಕ್ಕಾಗಿ ನೀವು ಆಧಾರ್ ಕೇಂದ್ರಕ್ಕೆ ಹೋಗಬೇಕಾಗಿಲ್ಲ. ಮನೆಯಲ್ಲಿ ಕುಳಿತು ಲ್ಯಾಪ್ ಟಾಪ್ ಮೂಲಕ ಆಧಾರ್ ಡೌನ್ಲೋಡ್ ಮಾಡಬಹುದು. ಮೊದಲು ಯುಐಡಿಎಐನ uidai.gov.in ನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು. ಗೆಟ್ ಆಧಾರ್ ಕಾರ್ಡ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಹೊಸ ಪುಟ ತೆರೆಯುತ್ತದೆ. ಅಲ್ಲಿ ಫೇಸ್ ದೃಢೀಕರಣ ಆಯ್ಕೆ ಮೇಲೆ ಕ್ಲಿಕ್ ಮಾಡುವ ಮೊದಲು ನೋಂದಾಯಿತ ಮೊಬೈಲ್ ಸಂಖ್ಯೆ ಹಾಕಬೇಕು. ದೃಢೀಕರಣ ಪ್ರಕ್ರಿಯೆಯ ಮೂಲಕ ಫೇಸ್ ವೆರಿಫೈ ಮಾಡಬೇಕು. ನಂತ್ರ ಓಕೆ ಮೇಲೆ ಕ್ಲಿಕ್ ಮಾಡಿ. ಆಗ ಕ್ಯಾಮರಾ ಓಪನ್ ಆಗುತ್ತದೆ. ಅದ್ರಲ್ಲಿ ನಿಮ್ಮ ಮುಖ ಸರಿಯಾಗಿ ಕಾಣುವಂತೆ ಕುಳಿತುಕೊಳ್ಳಬೇಕು. ನಿಮ್ಮ ಮುಖ ಕ್ಯಾಪ್ಚರ್ ಆಗ್ತಿದ್ದಂತೆ ಆಧಾರ್ ಕಾರ್ಡ್ ಡೌನ್ಲೋಡ್ ಆಗುತ್ತದೆ. ಕಂಪ್ಯೂಟರ್ ಸಿಸ್ಟಮ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಕ್ಯಾಮೆರಾ ಇರುವುದು ಬಹಳ ಮುಖ್ಯ.