ಆತ್ಮಹತ್ಯೆ ಮಾಡಿಕೊಳ್ಳಲು ಹೋದ ಯುವತಿಯೊಬ್ಬಳು ರೈಲು ಹಳಿ ಮೇಲೆ ನಿದ್ದೆಗೆ ಜಾರಿದ್ದಾಳೆ. ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಬಿಹಾರದ ಮೋತಿಹರಿಯ ಚಕಿಯಾ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಯುವತಿ ರೈಲ್ವೆ ಹಳಿಯ ಬಳಿ ಹೋಗಿ ಮಲಗಿ, ರೈಲಿಗಾಗಿ ಕಾಯುತ್ತಿದ್ದಳು- ಆದರೆ ಹೇಗೋ ನಿದ್ರೆಗೆ ಜಾರಿದಳು.
ಈ ಸಮಯದಲ್ಲಿ ರೈಲು ಕೂಡ ಬಂದಿದೆ. ಯುವತಿಯನ್ನು ದೂರದಿಂದಲೇ ನೋಡಿದ ಚಾಲಕ ತುರ್ತು ಬ್ರೇಕ್ ಹಾಕಿದ್ದಾನೆ. ಅದೃಷ್ಟವಶಾತ್ ಬಾಲಕಿ ಪವಾಡಸದೃಶವಾಗಿ ಪಾರಾಗಿದ್ದಾಳೆ. ಕೂಡಲೇ ಸ್ಥಳದಲ್ಲಿದ್ದ ಸ್ಥಳೀಯರು ಬಾಲಕಿಯನ್ನು ಎಬ್ಬಿಸಿ ಸುರಕ್ಷಿತವಾಗಿ ಮನೆಗೆ ಕರೆದೊಯ್ದರು.
ಜನರು ಬಂದು ಆಕೆಯನ್ನು ಎಬ್ಬಿಸುತ್ತಿದ್ದಂತೆ ಯುವತಿ ಕಿರುಚಲು ಪ್ರಾರಂಭಿಸುತ್ತಾಳೆ. ನಂತರ ಆಕೆಯನ್ನು ಸಮಾಧಾನ ಪಡಿಸಿ ಸುರಕ್ಷಿತವಾಗಿ ಮನೆಗೆ ಕರೆದೊಯ್ದಿದ್ದಾರೆ.