ಡಲ್ಲಾಸ್: ತಂತ್ರಜ್ಞಾನ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂದರೆ ಒಂದು ವಾರದಲ್ಲಿ ಇದ್ದದ್ದು ಇಂದು ಹಳೆಯದಾಗಿಬಿಡುತ್ತದೆ. ಆದರೂ ಹಳೆಯ ತಂತ್ರಜ್ಞಾನಗಳಿಗೆ ಇನ್ನೂ ಬೆಲೆ ಇದೆ ಎಂಬುದೇ ಅಚ್ಚರಿಯ ಸಂಗತಿ.
ಎಂಬತ್ತರ ದಶಕದಲ್ಲಿ ತಯಾರು ಮಾಡಿ ಪ್ರಸಿದ್ಧವಾದ ವಿಡಿಯೋ ಗೇಮ್ ಸೆಟ್ ಮತ್ತೊಮ್ಮೆ ವಿಶ್ವದಲ್ಲಿ ಅತಿ ದುಬಾರಿ ಬೆಲೆಗೆ ಮಾರಾಟವಾಗಿದೆ.
ಸುಪರ್ ಮಾರಿಯೋ ಬೋರ್ಸ್ ಎಂಬ ವಿಡಿಯೋ ಗೇಮ್ ನ ಬಾಕ್ಸ್ ತೆರೆಯದ ಕಾಪಿ ಒಂದು 1.14 ಲಕ್ಷ ಡಾಲರ್(85.4 ಲಕ್ಷಕ್ಕೆ) ಮಾರಾಟವಾಗಿದೆ. ವರದಿಯ ಪ್ರಕಾರ ಈ ಹಿಂದೆ ಈ ಗೇಮ್ ನ ಒಂದು ಕಾಪಿ 1 ಲಕ್ಷ ಡಾಲರ್‌ಗೆ ಮಾರಾಟವಾಗಿತ್ತು.
ಈ ಬಾರಿ ತನ್ನದೆ ಹಿಂದಿನ ದಾಖಲೆಯನ್ನು ವಿಡಿಯೋ ಗೇಮ್ ಮುರಿದಿದೆ. ಇದು 80 ರ ದಶಕದಲ್ಲಿ ಮೊದಲ ಬ್ಯಾಚ್ ನಲ್ಲಿ ಹೊರ ಬಂದ ವಿಡಿಯೋ ಗೇಮ್ ಸೆಟ್ ಆಗಿದ್ದು, ಕಾರ್ಡ್ ಬೋರ್ಡ್ ತಳ ಹಾಗೂ ಪ್ಲಾಸ್ಟಿಕ್ ಪ್ಯಾಕೆಟ್ ಹೊಂದಿದೆ.
ಅಮೆರಿಕಾದ ಡಲ್ಲಾಸ್ ಮೂಲದ ಹೆರಿಟೇಜ್ ಆಕ್ಷನ್ ಎಂಬ ಕಂಪನಿ ಮಾರಾಟ ಮಾಡಿದೆ. “ಈ ವಿಡಿಯೋ ಗೇಮ್ ಗೆ ಭಾರಿ ಬೇಡಿಕೆ ಇದೆ. ಇನ್ನೊಂದು ಲಾಟ್ ಮಾರಾಟಕ್ಕೆ ಇಟ್ಟರೂ ಇದೇ ಬೆಲೆಗೆ ಮಾರಾಟವಾಗುತ್ತದೆ” ಎಂದು ಹೆರಿಟೇಜ್ ಆಕ್ಷನ್ ವಿಡಿಯೋ ಗೇಮ್ ಕಂಪನಿಯ ಮಹಿಳಾ ನಿರ್ದೇಶಕಿ ವಲೇರಿ ಮೆಕ್ಲೀಕ್ ಅಭಿಪ್ರಾಯಪಟ್ಟಿದ್ದಾರೆ.
ಸುಪರ್ ಮಾರಿಯೊ ಬೋರ್ಸ್ ಇತಿಹಾಸದ ಅತಿ ವಿಶಿಷ್ಟ ವಿಡಿಯೋ ಗೇಮ್. ವಿಶ್ವ ವ್ಯಾಪಿ ಅತಿ ಹೆಚ್ಚು ಪ್ರಸಿದ್ಧವಾಗಿತ್ತು. ಸಿಗ್ಯುರ್ ಮೈಮೊತೊ ಎಂಬುವವರು ಸೃಷ್ಟಿಸಿದ್ದ ಈ ವಿಡಿಯೋ ಗೇಮ್ 1985 ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು.
330 ಮಿಲಿಯನ್‌ಗೂ ಅಧಿಕ ವಿಡಿಯೋ ಗೇಮ್ ಕಾಪಿಗಳು ಆಗ ವಿಶ್ವವ್ಯಾಪಿ ಮಾರಾಟವಾಗಿದ್ದವು. ವಿಶ್ವದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ವಿಡಿಯೋ ಗೇಮ್ ಕಾಪಿ ಎಂದು ಇದುವರೆಗೂ ಹೆಗ್ಗಳಿಕೆ ಇದೆ. ಮಾರಿಯೊ ಬೋರ್ಸ್ ನ ಮೊದಲ ಆರು ಕಾಪಿಗಳನ್ನು ಅಮೆರಿಕಾದ ನ್ಯಾಷನಲ್ ಮ್ಯೂಸಿಯಮ್ ಆಫ್ ಪ್ಲೇಸ್ ನ ಫೆಮಾ ವಿಡಿಯೋ ಗೇಮ್ ಹಾಲ್ ನಲ್ಲಿ ಇರಿಸಲಾಗಿದೆ.