ಕೋವಿಡ್-19 ಲಾಕ್ ಡೌನ್ ಕಾರಣದಿಂದಾಗಿ ವಿಮಾನಯಾನ ಸ್ಥಗಿತಗೊಂಡಿದ್ದು, ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕ ಮಂದಿಗೆ ಗಂಭೀರವಾದ ಆರ್ಥಿಕ ಸವಾಲುಗಳು ಬಂದೆರಗಿವೆ.
ಥಾಯ್ಲೆಂಡ್ನ ಸಹ ಪೈಲಟ್ ನಕಾರಿನ್ ಇಂಟಾ ಎಂಬ ವ್ಯಕ್ತಿ ಕಳೆದ ನಾಲ್ಕು ವರ್ಷಗಳಿಂದ ವೈಮಾನಿಕ ಸೇವೆಯಲ್ಲಿದ್ದರು. ಇದೀಗ ಅವರು ಸ್ಥಳೀಯ ಆನ್ಲೈನ್ ಮೆಸೆಂಜರ್ ಕಿರು ತಂತ್ರಾಂಶವೊಂದರಲ್ಲಿ ಬರುವ ಫುಡ್ ಆರ್ಡರ್ಗಳನ್ನು ಡೆಲಿವರಿ ಮಾಡುವ ಕೆಲಸದಲ್ಲಿ ತಲ್ಲೀನರಾಗಿದ್ದಾರೆ.
ಆರ್ಥಿಕ ಮುಗ್ಗಟ್ಟಿನ ಕಾರಣದಿಂದಾಗಿ ವಿಮಾನಗಳ ಓಡಾಟದ ಆಧಾರದ ಮೇಲೆ ಪೇಮೆಂಟ್ ಮಾಡಲು ವಿಮಾನಯಾನ ಸಂಸ್ಥೆಗಳು ನಿರ್ಧರಿಸಿರುವ ಕಾರಣ 42 ವರ್ಷದ ಈ ಪೈಲಟ್ ಅನ್ಯ ಮಾರ್ಗಗಳಿಗೆ ಇಳಿದಿದ್ದಾರೆ. ಇವರಂತೆಯೇ ಇನ್ನಷ್ಟು ಪೈಲಟ್ ಗಳೂ ಸಹ ಫುಡ್ ಡೆಲಿವರಿಯಂಥ ಮೇಕ್ ಶಿಫ್ಟ್ ಕೆಲಸಗಳಿಗೆ ಮೊರೆ ಹೋಗಿದ್ದಾರೆ.