ಮಿಸ್ಸಿಸೌಗಾ ಚಾಕೋಲೆಟ್, ಕ್ಯಾಂಡಿ ಇಂಥ ಸಿಹಿ ತಿಂಡಿ ಇಷ್ಟಪಡುವವರಿಗೆ ಅಪರೂಪದ ಆಫರ್ ಒಂದಿದೆ. ಉಚಿತವಾಗಿ ಸಿಹಿ ತಿಂಡಿ ನೀಡುವ ಜತೆಗೆ ಮೇಲಿನಿಂದ ಹಣವನ್ನೂ ನೀಡಲಾಗುತ್ತದೆ..!!!!
ಹೌದು, ಕೆನಡಾದ ಒಂಟಾರಿಯೊ ಪ್ರದೇಶದಲ್ಲಿರುವ ಮಿಸ್ಸಿಸೌಗಾ ನಗರದ ಕ್ಯಾಂಡಿ ಫನ್ ಹೌಸ್ ನ ಒಂದು ಪೋಸ್ಟ್ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಕಂಪನಿ ಒಬ್ಬ ಕ್ಯಾಂಡಿಯಾಲಾಜಿಸ್ಟ್ ಹುದ್ದೆಗಾಗಿ ಅರ್ಜಿ ಕರೆದಿದೆ.
ಕಂಪನಿ ತಯಾರಿಸುವ 30 ಸಾವಿರ ಉತ್ಪನ್ನಗಳನ್ನು ಒಂದೊಂದಾಗಿ ರುಚಿ ನೋಡಿ ಅದರ ಗುಣಮಟ್ಟ ಖಾತ್ರಿಪಡಿಸುವ ಕೆಲಸ ಇದಾಗಿದೆ.
“ಸಿಹಿತಿಂಡಿಯ ಬಗ್ಗೆ ಆಸಕ್ತಿ ಇರುವ ಉತ್ಸಾಹಿ ಪ್ರಾಮಾಣಿಕ ಅಭ್ಯರ್ಥಿಗಳು ಬೇಕಾಗಿದ್ದಾರೆ” ಎಂದು ಕಂಪನಿ ಜಾಹೀರಾತು ಪ್ರಕಟಿಸಿದೆ. ಅದಕ್ಕೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ.