ನವದೆಹಲಿ: ಪಿಎಫ್ ಮೂಲಕವೂ ವಿಮೆ ಕಂತು ಜಮಾ ಮಾಡಬಹುದಾಗಿದೆ. ಭಾರತೀಯ ಜೀವ ವಿಮಾ ನಿಗಮದಲ್ಲಿ ವಿಮೆ ಪಾಲಿಸಿ ಹೊಂದಿದ ಕಾರ್ಮಿಕರ ಭವಿಷ್ಯನಿಧಿ ಚಂದಾದಾರರು ವಿಮೆ ಕಂತನ್ನು ತಮ್ಮ ಪಿಎಫ್ ಖಾತೆ ಮೂಲಕ ಪಾವತಿಸಬಹುದಾಗಿದೆ.
ನಮೂನೆ 14ರಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಗೆ ಮನವಿ ಸಲ್ಲಿಸಬೇಕು. ಖಾತೆಯಲ್ಲಿ ಎರಡು ವರ್ಷಕ್ಕೆ ಕಂತಿನ ಮೊತ್ತಕ್ಕೆ ಅಗತ್ಯವಿರುವಷ್ಟು ಕನಿಷ್ಠ ಹಣ ಇಡಬೇಕು. ಆಗ ಪಿಎಫ್ ಖಾತೆ ಮತ್ತು ಎಲ್ಐಸಿ ಪಾಲಿಸಿಯನ್ನು ಜೋಡಣೆ ಮಾಡಲು ಸಾಧ್ಯವಾಗುತ್ತದೆ ಎಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ತಿಳಿಸಿದೆ.
ಎಲ್ಐಸಿ ವಿಮಾ ಕಂತಿನ ಗಡುವಿನೊಳಗೆ ಚಂದಾದಾರರ ಪಿಎಫ್ ಖಾತೆಯಿಂದ ನೇರವಾಗಿ ಎಲ್ಐಸಿಗೆ ಹಣ ಪಾವತಿಯಾಗುತ್ತದೆ. ಈ ಸೌಲಭ್ಯ ಪಡೆಯುವ ಚಂದದಾರರು ಎರಡು ವರ್ಷದಿಂದ ಇಪಿಎಫ್ಒ ಚಂದಾದಾರರಾಗಿರಬೇಕು ಎಂದು ಹೇಳಲಾಗಿದೆ.