![](https://kannadadunia.com/wp-content/uploads/2021/01/910033-rupee4.jpg)
ನವದೆಹಲಿ: ಛತ್ತೀಸ್ಗಢ ಸರ್ಕಾರ ಐದು ಲಕ್ಷ ಸರ್ಕಾರಿ ನೌಕರರಿಗೆ ಹೊಸ ವರ್ಷದ ಗಿಫ್ಟ್ ನೀಡಿದೆ. 6 ತಿಂಗಳ ಅರಿಯರ್ಸ್ ನೊಂದಿಗೆ ವೇತನ ಹೆಚ್ಚಳಕ್ಕೆ ಭೂಪೇಶ್ ಭಗೇಲ್ ನೇತೃತ್ವದ ಸರ್ಕಾರ ಅನುಮೋದನೆ ನೀಡಿದೆ.
ಜನವರಿ 2021 ರಿಂದಲೇ ಹೊಸ ವೇತನ ಅನ್ವಯವಾಗಲಿದ್ದು, 2020 ಜುಲೈನಿಂದ ಡಿ.31 ರವರೆಗೆ ಅರಿಯರ್ಸ್ ದೊರೆಯಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 300 ಕೋಟಿ ರೂ. ಹೊರೆಯಾಗಲಿದೆ ಎಂದು ಛತ್ತೀಸ್ಗಢ ಹಣಕಾಸು ಇಲಾಖೆ ಮಾಹಿತಿ ನೀಡಿದೆ.
ಇನ್ನು ಕೇಂದ್ರ ಸರ್ಕಾರಿ ನೌಕರರ ವೇತನದ ವಿಷಯದಲ್ಲೂ ಖುಷಿಯ ಸಂಗತಿ ನಿರೀಕ್ಷೆ ಇದೆ. 2021 ರ ಜನವರಿ 1 ರಿಂದ ಡಿಯರೆನ್ಸ್ ಅಲೋವೆನ್ಸ್ ನ್ನು ಶೇ. 4 ರಷ್ಟು ಹೆಚ್ಚಿಸುವ ನಿರೀಕ್ಷೆಯಲ್ಲಿ ನೌಕರರಿದ್ದಾರೆ.