
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಜುಲೈ ಒಂದರಿಂದ ಪೂರ್ಣ ಡಿಎ ಸಿಗಲಿದೆ. ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಸಂಸತ್ತಿನಲ್ಲಿ ನೆಮ್ಮದಿ ಸುದ್ದಿ ನೀಡಿದ್ದರು. ನೌಕರರಿಗೆ ಪ್ರಿಯ ಭತ್ಯೆಯ ಸಂಪೂರ್ಣ ಲಾಭ ಸಿಗಲಿದೆ. ಬಾಕಿ ಉಳಿದಿರುವ ಮೂರು ಕಂತುಗಳನ್ನು ನೀಡಲಾಗುವುದು ಎಂದಿದ್ದರು.
ಕೊರೊನಾ ಕಾರಣದಿಂದಾಗಿ ಜನವರಿ 1, 2020, ಜುಲೈ 1, 2020 ಮತ್ತು ಜನವರಿ 1, 2021ರ ಮೂರು ಕಂತುಗಳ ಪ್ರಿಯ ಭತ್ಯೆ ಮತ್ತು ಡಿಆರ್ ಸ್ಥಗಿತಗೊಳಿಸಲಾಗಿತ್ತು. ಇದ್ರ ಬಗ್ಗೆ ಮಾಹಿತಿ ನೀಡಿದ್ದ ಅನುರಾಗ್ ಠಾಕೂರ್, ಜುಲೈ 1ರಿಂದ ತುಟ್ಟಿ ಭತ್ಯೆಯ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದಿದ್ದರು.
ಕೇಂದ್ರ ಸರ್ಕಾರಿ ನೌಕರರು 2.57 ರ 7 ನೇ ಸಿಪಿಸಿ ಫಿಟ್‌ಮೆಂಟ್ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕು. ಇದರರ್ಥ 7 ನೇ ವೇತನ ಆಯೋಗದ ಫಿಟ್‌ಮೆಂಟ್ ಅಂಶದ ಪ್ರಕಾರ, ನೌಕರನು ಮಾಸಿಕ 21,000 ರೂಪಾಯಿಗಳ ಮೂಲ ವೇತನವನ್ನು ಪಡೆದರೆ, ವ್ಯಕ್ತಿಯ ಮಾಸಿಕ 7 ನೇ ಸಿಪಿಸಿ ವೇತನ ಹೆಚ್ಚಳವು (20,000 x 2.57 ರೂ.) 51,400 ರೂಪಾಯಿ ಆಗಿರುತ್ತದೆ.
ಸದ್ಯ ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡಾ 17 ರಷ್ಟು ಡಿ.ಎ. ಸಿಗ್ತಿದೆ. ಕಳೆದ ವರ್ಷ ಕೇಂದ್ರ ಸಚಿವ ಸಂಪುಟವು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಲು ಒಪ್ಪಿಗೆ ನೀಡಿತ್ತು. ಇದು ಜನವರಿ 1, 2020 ರಿಂದ ಜಾರಿಗೆ ಬರಬೇಕಿತ್ತು. ಕೊರೊನಾ ಕಾರಣದಿಂದಾಗಿ ಇದನ್ನು ನೀಡಿರಲಿಲ್ಲ.