alex Certify ವೇತನದಾರರೇ ಗಮನಿಸಿ..! ಕಡಿಮೆಯಾಗಲಿದೆ ಟೇಕ್ ಹೋಂ ಸ್ಯಾಲರಿ – ಹೆಚ್ಚಾಗಲಿದೆ ಪಿಎಫ್, ಗ್ರಾಚುಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇತನದಾರರೇ ಗಮನಿಸಿ..! ಕಡಿಮೆಯಾಗಲಿದೆ ಟೇಕ್ ಹೋಂ ಸ್ಯಾಲರಿ – ಹೆಚ್ಚಾಗಲಿದೆ ಪಿಎಫ್, ಗ್ರಾಚುಟಿ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬಜೆಟ್ ಮಂಡಿಸಲಿದ್ದು, ದೇಶದ ಜನರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ವ್ಯಕ್ತಿಗಳು ಹೆಚ್ಚಿನ ಕುತೂಹಲ ಹೊಂದಿದ್ದಾರೆ. 2019 ರ ವೇತನ ಸಂಹಿತೆ ಕುರಿತು ಸರ್ಕಾರದ ಅಧಿಸೂಚನೆ ಪ್ರಕಾರ, ಮುಂದಿನ ಹಣಕಾಸು ವರ್ಷದಲ್ಲಿ ಅಂದರೆ 2021 ರ ನೌಕರರ ಟೇಕ್ ಹೋಮ್ ವೇತನ ಕಡಿಮೆಯಾಗಬಹುದು. ಆದರೆ, ಪಿಎಫ್ ಮತ್ತು ಗ್ರಾಚುಟಿ ಹೆಚ್ಚಾಗಬಹುದು ಎಂದು ಹೇಳಲಾಗಿದೆ.

ಕೆಲವು ತಿಂಗಳ ಹಿಂದೆ ಸರ್ಕಾರ 2019 ರ ವೇತನ ಸಮಿತಿ ಅಡಿಯಲ್ಲಿ ಕರಡು ನಿಯಮಗಳ ಅಧಿಸೂಚನೆ ನೀಡಿದ್ದು, ನೌಕರರ ವೇತನವನ್ನು ಮುಂದಿನ ಹಣಕಾಸು ವರ್ಷದಿಂದ ಅಂದರೆ, ಏಪ್ರಿಲ್ 2021 ರಿಂದ ಕಡಿತಗೊಳಿಸಬಹುದು.

ಕರಡು ನಿಯಮ ಅನುಸರಿಸಿ ಕಂಪನಿಗಳು ತಮ್ಮ ವೇತನ ಪುನರ್ ರಚಿಸುವ ಅಗತ್ಯವಿತ್ತು. ನೌಕರರ ಭತ್ಯೆ ಘಟಕ ಒಟ್ಟು ವೇತನದ ಪ್ಯಾಕೇಜ್ ನ ಶೇಕಡ 50 ರಷ್ಟು ಮೀರಬಾರದು. ಇದರ ಪರಿಣಾಮ ಕಂಪನಿಗಳು ಅಥವಾ ಉದ್ಯೋಗದಾತರು 50 ಪ್ರತಿಶತದಷ್ಟು ವೇತನವನ್ನು ಮೂಲವೇತನ ಘಟಕಕ್ಕೆ ವಿನಿಯೋಗಿಸಬೇಕಿದೆ.

ಇದರ ಅರ್ಥ ನೌಕರರ ಗ್ರಾಚುಟಿ ಮತ್ತು ಪಿಎಫ್ ಕೊಡುಗೆ ಹೆಚ್ಚಾಗುತ್ತದೆ. ಹಾಗಾಗಿ ನೌಕರರ ವೇತನ ಕಡಿಮೆಗೊಳಿಸಬಹುದು. ಗ್ರಾಚುಟಿ ಮತ್ತು ಪಿಎಫ್ ಏರಿಕೆಯಾಗಬಹುದು ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...