ದೇಶದಲ್ಲಿರುವ 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಎದುರು ನೋಡುತ್ತಿರುವ ಏಳನೇ ವೇತನ ಆಯೋಗ ಜಾರಿಯ ಕುರಿತಂತೆ ಒಂದೊಂದೇ ಅಪ್ ಡೇಟ್ ಗಳು ಹೊರಬೀಳುತ್ತಿದೆ.
ಸದ್ಯದ ಮಾಹಿತಿ ಪ್ರಕಾರ ಜುಲೈ ಬಳಿಕ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಕೇಂದ್ರ ಸರ್ಕಾರಿ ನೌಕರರಿಗೆ ಪ್ರತ್ಯೇಕ ಭತ್ಯೆ ಸಿಗಲಿದೆ.
ನೌಕರರ ನೈಟ್ ಡ್ಯೂಟಿ ಭತ್ಯೆ ಕುರಿತು ಸರ್ಕಾರವು ಶೀಘ್ರದಲ್ಲೇ ಮಾರ್ಗಸೂಚಿ ಹೊರಡಿಸಬಹುದೆಂದು ನಿರೀಕ್ಷಿಸಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆ ಎಲ್ಲಾ ರೀತಿಯ ಭತ್ಯೆಗಳನ್ನು ತಡೆಹಿಡಿಯಲಾಗಿದ್ದರೂ, ಜುಲೈನಲ್ಲಿ ಡಿಎ ಮತ್ತು ಡಿಆರ್ ಹೆಚ್ಚಳ ಕುರಿತು ಸುದ್ದಿಗಳು, ರಾತ್ರಿ ಕರ್ತವ್ಯ ಭತ್ಯೆಗಳ ಬಗ್ಗೆ ಸ್ಪಷ್ಟತೆಮೂಡಲಿದೆ.
ಈಗಿನ ವ್ಯವಸ್ಥೆ ಬದಲು ಹೊಸ ವ್ಯವಸ್ಥೆ ಜಾರಿಯಾಗಿ ರಾತ್ರಿ ಭತ್ಯೆ ನೀಡುವುದರಿಂದ ನೌಕರರಿಗೆ ಅನುಕೂಲವಾಗುತ್ತದೆ ಮತ್ತು ಸಂಬಳವೂ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯವಿದೆ.
ಪಿಂಕ್ ‘ವಾಟ್ಸಾಪ್ ನ್ಯೂ ವರ್ಷನ್’ ಲಿಂಕ್ ಒತ್ತಿದವರಿಗೆ ಶಾಕ್
ರಾತ್ರಿ ಕರ್ತವ್ಯದ ಸಮಯದಲ್ಲಿ ಪ್ರತಿ ಗಂಟೆಗೆ 10 ನಿಮಿಷಗಳ ವೆಯ್ಟೇಜ್ ನೀಡಲಾಗುವುದು ರಾತ್ರಿ 10 ರಿಂದ ಬೆಳಿಗ್ಗೆ 6ರವರೆಗೆ ಮಾಡುವ ಕರ್ತವ್ಯವನ್ನು ರಾತ್ರಿ ಕರ್ತವ್ಯವೆಂದು ಪರಿಗಣಿಸಲಾಗುತ್ತದೆ. ಇದಕ್ಕಾಗಿ, ನೈಟ್ ಡ್ಯೂಟಿ ಭತ್ಯೆಯ ಮೂಲ ವೇತನ ಮಿತಿಯನ್ನು ತಿಂಗಳಿಗೆ 43,600 ರೂ.ಗೆ ನಿಗದಿಪಡಿಸಲಾಗುತ್ತದೆ.
ರಾತ್ರಿ ಕರ್ತವ್ಯ ಭತ್ಯೆ ನೀಡುವ ಲೆಕ್ಕಾಚಾರವನ್ನೂ ಸಹ ನಿಗದಿಪಡಿಸಿದ್ದು, ಈ ಭತ್ಯೆಯ ಪಾವತಿಯನ್ನು ಒಂದು ಗಂಟೆಯ ಆಧಾರದ ಮೇಲೆ ಮಾಡಲಾಗುತ್ತದೆ.
ಒಟ್ಟು ಮೂಲ ವೇತನ ಮತ್ತು ಡಿಯರ್ ನೆಸ್ ಭತ್ಯೆಯನ್ನು 200 ರಿಂದ ಭಾಗಿಸುವ ಮೂಲಕ ನೀಡಲಾಗುತ್ತದೆ (ಬಿಪಿ + ಡಿಎ / 200). ಮೂಲ ವೇತನ ಮತ್ತು ಡಿಯರ್ ನೆಸ್ ಭತ್ಯೆಯನ್ನು ಏಳನೇ ವೇತನ ಆಯೋಗದ ಆಧಾರದಲ್ಲಿ ಲೆಕ್ಕಹಾಕಲಾಗುತ್ತದೆ.