ಹೊಸ ವೇತನ ಸಂಹಿತೆ ಜಾರಿಗೆ ಬಂದ್ರೆ ನೌಕರರ ಸಂಬಳದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ. ಟೇಕ್ ಹೋಮ್ ಸಂಬಳ, ಪಿಎಫ್ ಮತ್ತು ಗ್ರಾಚ್ಯುಟಿ ಸೇರಿದಂತೆ ಅನೇಕ ವಿಷ್ಯದಲ್ಲಿ ಬದಲಾವಣೆಯಾಗಲಿದೆ.
ವೇತನ ಸಂಹಿತೆ 2019ರ ಕುರಿತು ಸರ್ಕಾರದ ಅಧಿಸೂಚನೆ ಏಪ್ರಿಲ್ 2021ರಿಂದ ಜಾರಿಗೆ ಬರುವ ಸಾಧ್ಯತೆಯಿದೆ. ಇದು ಜಾರಿಗೆ ಬಂದ್ರೆ ಟೇಕ್ ಹೋಮ್ ವೇತನ ಕಡಿತಗೊಳ್ಳಲಿದೆ. ಪಿಎಫ್ ಮತ್ತು ಗ್ರಾಚ್ಯುಟಿ ಏರಿಕೆಯಾಗಲಿದೆ. ಹೊಸ ನೀತಿ ಪ್ರಕಾರ, ನಿವ್ವಳ ಮಾಸಿಕ ವೇತನದ ಶೇಕಡಾ 50ಕ್ಕಿಂತ ಹೆಚ್ಚಿನ ಹಣವನ್ನು ಭತ್ಯೆ ರೂಪದಲ್ಲಿ ಪಡೆಯಲು ಸಾಧ್ಯವಿಲ್ಲ.
ನೌಕರರ ಗ್ರಾಚ್ಯುಟಿ ಹಾಗೂ ಪಿಎಫ್ ಹಣ ಹೆಚ್ಚಾಗಲಿದ್ದು, ಟೇಕ್ ಹೋಮ್ ಸಂಬಳ ಕಡಿಮೆಯಾದ್ರೂ ನೌಕರರಿಗೆ ನಷ್ಟವಿಲ್ಲ. ಫೆಬ್ರವರಿ 8 ರಂದು ಕಾರ್ಮಿಕ ಕಾರ್ಯದರ್ಶಿ ಅಪೂರ್ವಾ ಚಂದ್ರ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ನಾಲ್ಕು ಕಾರ್ಮಿಕ ಸಂಹಿತೆಯ ಅಡಿಯಲ್ಲಿ ನಿಯಮಗಳನ್ನು ಅಂತಿಮಗೊಳಿಸುತ್ತಿದೆ ಎಂದಿದ್ದರು. ಸಚಿವಾಲಯವು ಶೀಘ್ರದಲ್ಲೇ ನಾಲ್ಕು ನಿಯಮಗಳನ್ನು ಜಾರಿಗೆ ತರಲಿದೆ ವೇತನದ ಸಂಹಿತೆ, ಕೈಗಾರಿಕಾ ಸಂಬಂಧಗಳು, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳು ಮತ್ತು ಸಾಮಾಜಿಕ ಭದ್ರತಾ ಸಂಕೇತಗಳನ್ನು ಜಾರಿಗೆ ತರಲಿದೆ ಎಂದಿದ್ದರು.